ಮನೆಗೆ ಬಂದ ಸೊಸೆಯ ಮೇಲೆ ಅತ್ಯಾಚಾರವೆಸಗಿ ಮಾವ ಪರಾರಿ

ಸೋಮವಾರ, 20 ನವೆಂಬರ್ 2023 (14:08 IST)
ಮಹಿಳೆಯ ಮೇಲಿನ ಅತ್ಯಾಚಾರ ಘಟನೆಯ ನಂತರ ಆರೋಪಿ ಪರಾರಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು  ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ ತಿಳಿಸಿದ್ದಾರೆ 
 
ಕೇವಲ ಎರಡು ತಿಂಗಳುಗಳ ಹಿಂದೆ ವಿವಾಹವಾಗಿ ಮನೆಗೆ ಬಂದ ಸೊಸೆಯ ಮೇಲೆ ಮಾವನೇ ಅತ್ಯಾಚಾರವೆಸಗಿ ಪರಾರಿಯಾದ ಪ್ರಕರಣ ನಗರದ ಪಚ್ಲಿಬುರ್ಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 
 
ನಿನ್ನೆ ಬೆಳಿಗ್ಗೆ 8 ಗಂಟೆಗೆ ಪುತ್ರ ಕೆಲಸದ ನಿಮಿತ್ಯ ಹೊರಗಡೆ ಹೋದಾಗ ಮನೆಯಲ್ಲಿ ಏಕಾಂಗಿಯಾಗಿದ್ದ ಸೊಸೆಯ ಮೇಲೆ ಅತ್ಯಾಚಾರವೆಸಗಿದ ಮಾವ ಮನೆಯಿಂದ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಅತ್ಯಾಚಾರಕ್ಕೊಳಗಾದ ಮಹಿಳೆ ಪತಿಗೆ ವಿಷಯ ತಿಳಿಸಿದ್ದಲ್ಲದೇ  ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.    
 
ಆರೋಪಿಯ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್‌ಗಳು ದಾಖಲಾಗಿಲ್ಲ. ಆದರೆ, ನೆರೆಹೊರೆಯವರ ಪ್ರಕಾರ ಆತನ ನಡುವಳಿಕೆ ಸರಿಯಾಗಿರಲಿಲ್ಲ. ಮಾವನ ವರ್ತನೆಯ ಬಗ್ಗೆ ಅತ್ಯಾಚಾರಕ್ಕೊಳಗಾದ ಮಹಿಳೆ ಈ ಮೊದಲು ತನ್ನ ಪತಿಗೆ ಮಾಹಿತಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ