ಇಥಿಯೊಪಿಯಾದ ಪ್ರಧಾನಿ ಅಬಿ ಅಹಮದ್‌ ಅಲಿಗೆ ಒಲಿದ ನೊಬೆಲ್‌ ಶಾಂತಿ ಪ್ರಶಸ್ತಿ

ಶನಿವಾರ, 12 ಅಕ್ಟೋಬರ್ 2019 (08:34 IST)
ಸ್ಟಾಕ್ ಹೋಮ್ : ಗಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮಾಡಿದ ಪ್ರಯತ್ನಕ್ಕಾಗಿ ಇಥಿಯೊಪಿಯಾದ ಪ್ರಧಾನಿ ಅಬಿ ಅಹಮದ್‌ ಅಲಿ ಅವರಿಗೆ ವಾರ್ಷಿಕ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ.




ಅಬಿ ಅಹಮದ್‌ ಅಲಿ ಅವರು ಪೂರ್ವ ಆಫ್ರಿಕಾದ ಉತ್ತರದಲ್ಲಿನ ಕೆಂಪು ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಎರಿಟ್ರಿಯ ದೇಶದ ಗಡಿ ಸಂಘರ್ಷವನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.


ಈ ನಿಟ್ಟಿನಲ್ಲಿ 2019 ನೇ ಸಾಲಿನ ನೋಬೆಲ್ ಶಾಂತಿಯನ್ನು ಪ್ರಧಾನಿ ಅಬಿ ಅಹಮದ್‌ ಅಲಿ ಅವರಿಗೆ ಶುಕ್ರವಾರ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ