ಮೂವರು ಖ್ಯಾತ ಸಂಶೋಧಕರಿಗೆ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪ್ರಕಟ

ಮಂಗಳವಾರ, 8 ಅಕ್ಟೋಬರ್ 2019 (08:03 IST)
ಸ್ಟಾಕ್ ಹೋಂ : ಅಮೆರಿಕ ಮತ್ತು ಬ್ರಿಟನ್ ನ ಮೂವರು ಸಂಶೋಧಕರಿಗೆ ವೈದ್ಯಕೀಯ ಕ್ಷೇತ್ರದ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.




ಫಿಸಿಯೋಲಾಜಿ ಅಥವಾ ಮೆಡಿಸಿನ್ ವಿಭಾಗದಲ್ಲಿ ಖ್ಯಾತ ವಿಜ್ಞಾನಿಗಳಾದ ಅಮೇರಿಕಾದ ಅಮೆರಿಕದ ವಿಲಿಯಂ ಕೇಲಿನ್ ಮತ್ತು ಗ್ರೆಗ್ ಸೆಮೆಂಝಾ ಹಾಗು ಬ್ರಿಟನ್ ನ ಪೀಟರ್ ರ್ಯಾಟ್ ಕ್ಲಿಫ್ ಅವರು ಈ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಕೋಶಗಳ ಪ್ರಜ್ಞೆ ಮತ್ತು ಆಮ್ಲಜನಕ ಲಭ್ಯತೆಗಾಗಿ ಅವುಗಳ ಅಳವಡಿಕೆ ಕುರಿತ ಮಹತ್ವದ ಸಂಶೋಧನೆಗಾಗಿ ಈ ವಿಜ್ಞಾನಿಗಳಿಗೆ ಈ ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಮೂವರು 9 ಮಿಲಿಯನ್ ಕ್ರೋನರ್ (18 918,000) ನಗದು ಪ್ರಶಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ ಅಂಥ ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ