ಚೀನಾದಲ್ಲಿರುವ ಜಿಯೋಪಿಂಗ್ ಅರಣ್ಯ ಪ್ರಾಣಿ ಸಂಗ್ರಹಾಲಯದಲ್ಲಿ ಅಧಿಕಾರಿಗಳು ತೋಳದ ಬೋನ್ ನಲ್ಲಿ ತೋಳದ ಜೊತೆ ನಾಯಿಯನ್ನು ಹಾಕಿ ತೋಳ ಎಂದು ಹೆಸರು ಬರೆದಿದ್ದರು. ಇದನ್ನು ಕಂಡ ಪ್ರವಾಸಿಗರು ಅಧಿಕಾರಿಗಳು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಇದಕ್ಕೆ ವಿವರಣೆ ನೀಡಿದ ಜೂ ಅಧಿಕಾರಿಗಳು, ಆ ಬೋನಿನಲ್ಲಿ ತೋಳ ಇತ್ತು. ಆದರೆ ಪ್ರವಾಸಿಗರು ನೋಡುವ ಸಮಯದಲ್ಲಿ ಮಲಗಿರುವ ಸಾಧ್ಯತೆ ಇದೆ. ಈ ಹಿಂದೆ ಇತರೆ ತೋಳಗಳ ಜೊತೆ ಕಾದಾಡಿ ಸುಸ್ತಾಗಿದ್ದ ಈ ತೋಳಕ್ಕೆ ಜೊತೆಯಾಗಲು ಎರಡು ಹೆಣ್ಣು ನಾಯಿಗಳನ್ನು ಬಿಡಲಾಗಿತ್ತು. ಅದರಲ್ಲಿ ಒಂದು ಅತಿಯಾಗಿ ತೋಳವನ್ನು ಹಚ್ಚಿಕೊಂಡಿದ್ದು, ಜೊತೆಯಲ್ಲೇ ಎರಡೂ ಪ್ರಾಣಿಗಳನ್ನು ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.