Operation Sindoor: ಭಾರತ ದುಃಖಿಸುವಂತೆ ಮಾಡುತ್ತೇವೆ, ಶತ್ರುಗಳನ್ನು ಸದೆಬಡಿಯುವುದು ನಮಗೆ ಗೊತ್ತು: ಪಾಕಿಸ್ತಾನ ಪ್ರಧಾನಿ

Krishnaveni K

ಬುಧವಾರ, 7 ಮೇ 2025 (09:14 IST)
Photo Credit: X
ಇಸ್ಲಾಮಾಬಾದ್: ಆಪರೇಷನ್ ಸಿಂದೂರ್ ಹೆಸರಿನಲ್ಲಿ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತಕ್ಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ. ಭಾರತ ದುಃಖಿಸುವಂತೆ ಮಾಡುತ್ತೇವೆ, ಶತ್ರುಗಳನ್ನು ಸದೆಬಡಿಯುವುದು ನಮಗೂ ಗೊತ್ತು ಎಂದಿದ್ದಾರೆ.

ನಿನ್ನೆ ತಡರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಕಡೆ ಭಾರತೀಯ ಸೇನೆ ದಾಳಿ ನಡೆಸಿ ಸಾಕಷ್ಟು ಉಗ್ರರನ್ನು ಮಟ್ಟ ಹಾಕಿದೆ. ತನ್ನ ಗಡಿಯೊಳಗೆ ಭಾರತ ದಾಳಿ ನಡೆಸಿರುವುದನ್ನು ಖಚಿತಪಡಿಸಿರುವ ಪಾಕಿಸ್ತಾನ ಪ್ರಧಾನಿ ಷರೀಫ್ ಪ್ರತೀಕಾರದ ಮಾತನಾಡಿದ್ದಾರೆ.

ಭಾರತ ದಾಳಿ ನಡೆಸಿದ್ದು ಯುದ್ಧ ಸಾರಿರುವುದಕ್ಕೆ ಸಮ ಎಂದಿರುವ ಪಾಕ್ ಪ್ರಧಾನಿ ಇದಕ್ಕೆ ನಾವು ತಕ್ಕ ತಿರುಗೇಟು ನೀಡಲಿದ್ದೇವೆ ಎಂದಿದ್ದಾರೆ. ಪಾಕಿಸ್ತಾನಕ್ಕೆ ತಿರುಗೇಟು ನೀಡುವ ಎಲ್ಲಾ ಹಕ್ಕುಗಳೂ ಇವೆ ಎಂದಿದ್ದಾರೆ.

‘ಶತ್ರುಗಳು ಯಶಸ್ಸು ಸಾಧಿಸುವುದನ್ನು ಬಿಡೆವು. ನಾವು ಅವರು ದುಃಖಿಸುವಂತೆ ಮಾಡಲಿದ್ದೇವೆ. ಶತ್ರುಗಳನ್ನು ಸದೆಬಡಿಯಲು ನಮಗೂ ಗೊತ್ತು. ಭಾರತ ಸಾರಿರುವ ಯುದ್ಧಕ್ಕೆ ತಕ್ಕ ಉತ್ತರ ಕೊಡುವ ಎಲ್ಲಾ ಹಕ್ಕುಗಳು ನಮಗೆ ಇದೆ. ಶತ್ರು ರಾಷ್ಟ್ರವನ್ನು ಹೇಗೆ ಡೀಲ್ ಮಾಡಬೇಕು ಗೊತ್ತು’ ಎಂದಿದ್ದಾರೆ. ಇದರ ಜೊತೆಗೆ ಇಂದು ಪಾಕ್ ಭದ್ರತಾ ಸಲಹೆಗಾರರೊಂದಿಗೆ ಸಭೆಯನ್ನೂ ಕರೆದಿದ್ದಾರೆ. ಮುಂದಿನ 48 ಗಂಟೆಗಳಿಗೆ ಪಾಕಿಸ್ತಾನ ತನ್ನ ಎಲ್ಲಾ ವಿಮಾನ ಯಾನವನ್ನು ರದ್ದುಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ