Operation Sindoor: ಮೋದಿಗೆ ಹೇಳಿ ಎಂದಿದ್ದಕ್ಕೆ ತಕ್ಕ ಉತ್ತರ ಕೊಟ್ಟ ಮೋದಿ

Krishnaveni K

ಬುಧವಾರ, 7 ಮೇ 2025 (07:07 IST)
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ತಕ್ಕ ಪ್ರತೀಕಾರ ತೀರಿಸಿಕೊಂಡಿದೆ. 9 ಕಡೆ ತಡರಾತ್ರಿ ಏರ್ ಸ್ಟ್ರೈಕ್ ನಡೆಸಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಈ ಮೂಲಕ ಪಹಲ್ಗಾಮ್ ದಾಳಿ ಸಂದರ್ಭ ಮೋದಿಗೆ ಹೋಗಿ ಹೇಳು ಎಂದಿದ್ದಕ್ಕೆ ಮೋದಿ ಸರಿಯಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಕಡೆ ಭಾರತ ನಿನ್ನೆ ತಡರಾತ್ರಿ ಏರ್ ಸ್ಟ್ರೈಕ್ ಮಾಡಿ ಉಗ್ರರ ಮಾರಣಹೋಮ ನಡೆಸಿದೆ. ಇದರಲ್ಲಿ ಬಹಲ್ವಾಪುರ್ ಒಂದೇ ಕಡೆ 30 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಪಹಲ್ಗಾಮ್ ನಲ್ಲಿ ಉಗ್ರರು ಅಮಾಯಕ ಹಿಂದೂ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದರು. ಕನ್ನಡಿಗ ಮಂಜುನಾಥ್ ಎಂಬವರನ್ನು ಹತ್ಯೆ ಮಾಡಿದ ಬಳಿಕ ಉಗ್ರನ ಬಳಿ ಮಂಜುನಾಥ್ ಪತ್ನಿ ಮತ್ತು ಪುತ್ರ ನಮ್ಮನ್ನೂ ಸಾಯಿಸಿ ಎಂದಿದ್ದಕ್ಕೆ ಇಲ್ಲ ಹೋಗಿ ಮೋದಿಗೆ ಹೇಳು ಎಂದಿದ್ದನಂತೆ.

ಇದೀಗ ಮೋದಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾದ ಬಳಿಕ ಪ್ರತೀ ಭಾರತೀಯನ ರಕ್ತ ಪ್ರತೀಕಾರಕ್ಕಾಗಿ ಕುದಿಯುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಿಯೇ ನೀಡುತ್ತೇವೆ ಎಂದಿದ್ದರು. ಅದರಂತೆ ಈಗ ಉಗ್ರರ ಹುಟ್ಟಡಗಿಸಲು ದಾಳಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ