Operation Sindoor: ಭಾರತೀಯ ಸೇನಾ ದಾಳಿಗೆ ಆಪರೇಷನ್ ಸಿಂದೂರ್ ಎಂದೇ ಹೆಸರಿಟ್ಟಿದ್ದೇಕೆ ಇಲ್ಲಿದೆ ಕಾರಣ
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಟ್ಟು 9 ಉಗ್ರರ ಅಡಗುದಾಣಗಳ ಮೇಲೆ ನಿನ್ನೆ ತಡರಾತ್ರಿ ಪಕ್ಕಾ ಪ್ಲ್ಯಾನ್ ಮಾಡಿ ಭಾರತೀಯ ವಾಯುಸೇನೆ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳನ್ನು ಬಳಸಿ ದಾಳಿ ಮಾಡಿ ಬಂದಿದೆ. ಇದರಲ್ಲಿ ನೂರಾರು ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಕಾರ್ಯಾಚರಣೆ ಮುಗಿದ ಬೆನ್ನಲ್ಲೇ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಮುಕ್ತಾಯವಾಗಿದೆ ಎಂದಿದೆ. ಅಷ್ಟಕ್ಕೂ ಈ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ್ ಎಂದು ಹೆಸರಿಟ್ಟಿದ್ದೇಕೆ? ಇಲ್ಲಿದೆ ಕಾರಣ.
ಪಹಲ್ಗಾಮ್ ನಲ್ಲಿ ಪ್ರವಾಸೀ ಹಿಂದೂ ಪುರುಷರನ್ನೇ ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮಹಿಳೆಯರು ತಮ್ಮ ಪತಿಯನ್ನು ಕಳೆದುಕೊಂಡು ಸಿಂದೂರವನ್ನು ಕಳೆದುಕೊಂಡಿದ್ದರು. ಇದಕ್ಕಾಗಿಯೇ ಈ ಆಪರೇಷನ್ ಗೆ ಆಪರೇಷನ್ ಸಿಂದೂರ್ ಎಂದೇ ಹೆಸರಿಟ್ಟು ಸೇನೆ ದಾಳಿ ನಡೆಸಿದೆ.