ನಾಲ್ವರು ಆತ್ಮಾಹುತಿ ಬಾಂಬರ್‌ಗಳು ಪಾಕ್ ಸೇನೆಯ ಗುಂಡಿಗೆ ಬಲಿ

ಶುಕ್ರವಾರ, 2 ಸೆಪ್ಟಂಬರ್ 2016 (13:17 IST)
ಪೇಶಾವರದ ವಾಯವ್ಯ ನಗರದಲ್ಲಿ  ಪಾಕಿಸ್ತಾನದ ಕ್ರೈಸ್ತ ಕಾಲೋನಿಯೊಂದರ ಮೇಲೆ ದಾಳಿಗೆ ಪ್ರಯತ್ನಿಸಿದ ನಾಲ್ವರು ಆತ್ಮಾಹುತಿ ಬಾಂಬರ್‌ಗಳನ್ನು ಭದ್ರತಾ ಪಡೆಗಳು ಗುಂಡಿನ ಚಕಮಕಿಯಲ್ಲಿ ಹತ್ಯೆಮಾಡಿವೆ. ಆತ್ಮಾಹುತಿ ಸ್ಫೋಟಕದ ಉಡುಪು ಧರಿಸಿದ್ದ ಉಗ್ರಗಾಮಿಗಳು ವಾರ್ಸಾಕ್ ಅಣೆಕಟ್ಟಿನ ಬಳಿಯ ಕಾಲೋನಿಯ ಮೇಲೆ ದಾಳಿಗೆ ಯತ್ನಿಸಿದಾಗ, ಸೇನಾ ಹೆಲಿಕಾಪ್ಟರ್‌ಗಳ ನೆರವಿನೊಂದಿಗೆ ಯೋಧರು ಗುಂಡಿನ ಚಕಮಕಿ ನಡೆಸಿದರು.
 
 ನಾಲ್ವರು ಆತ್ಮಾಹುತಿ ಬಾಂಬರ್‌ಗಳು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಡನೆ ಬೆಳಿಗ್ಗೆ 5.50ಕ್ಕೆ ಭದ್ರತಾ ಕಾವಲುಗಾರನನ್ನು ಥಳಿಸಿ ವಾರ್ಸಾಕ್ ಕ್ರೈಸ್ತ ಕಾಲೋನಿಯೊಳಗೆ ಪ್ರವೇಶಿಸಿದರು ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಕೂಡಲೇ ಸ್ಪಂದಿಸಿದ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿಯಿತು.

ಉಗ್ರರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದು ಎಲ್ಲಾ ನಾಲ್ವರು ಭಯೋತ್ಪಾದಕರು ಹತರಾದರು ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಇಬ್ಬರು ಅಲೆಮಿಲಿಟರಿ ಯೋಧರು, ಒಬ್ಬ ಪೊಲೀಸ್ ಮತ್ತು ಇಬ್ಬರು ಭದ್ರತಾ ಕಾವಲುಗಾರರು ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದಾರೆ.
 
 ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮತ್ತು ಹಿಂಸಾಚಾರ ಸರ್ವೇಸಾಮಾನ್ಯವಾಗಿದೆ. ಮುಸ್ಲಿಮರು ಬಹುಸಂಖ್ಯಾತರಾಗಿದ್ದು, ಶೇ. 90ರಷ್ಟು ಜನರಿದ್ದು, ಶೇ. 10ರಷ್ಟಿರುವ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯವೆಸಲಾಗುತ್ತಿದೆ.  ಪಾಕಿಸ್ತಾನದ ತಾಲಿಬಾನ್ ವಿಶೇಷವಾಗಿ ಅಲ್ಪಸಂಖ್ಯಾತ ಗುಂಪನ್ನು ಗುರಿಯಿರಿಸುತ್ತಿದೆ. 2011ರಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಫೆಡರಲ್ ಸಚಿವ, ಕ್ರೈಸ್ತ ಸಮುದಾಯಕ್ಕೆ ಸೇರಿದ ಶಹಬಾಜ್ ಭಟ್ಟಿಯನ್ನು ತಾಲಿಬಾನ್ ಗುಂಡಿಕ್ಕಿ ಕೊಂದಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ