ರಾಮಮಂದಿರದ ಬಗ್ಗೆ ವಿಶ್ವ ಸಂಸ್ಥೆಯಲ್ಲಿ ಖ್ಯಾತೆ ತೆಗೆದ ಪಾಕಿಸ್ತಾನ

Krishnaveni K

ಭಾನುವಾರ, 4 ಫೆಬ್ರವರಿ 2024 (15:35 IST)
ನವದೆಹಲಿ: ಭಾರತದ ಆಂತರಿಕ ವಿಚಾರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಚಾಳಿಯನ್ನು ಮತ್ತೆ ಶತ್ರು ರಾಷ್ಟ್ರ ಪಾಕಿಸ್ತಾನ ತೋರಿಸಿದೆ.

ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಿತ್ತು. ಸ್ವತಃ ಪ್ರಧಾನಿ ಮೋದಿ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಇದು ಮೋದಿ ಸರ್ಕಾರದ ಐತಿಹಾಸಿಕ ಸಾಧನೆ ಎಂದೇ ಹಿಂದೂಗಳು ನಂಬಿದ್ದಾರೆ. ಈ ನಡುವೆ ನೆರೆಯ ರಾಷ್ಟ್ರ ಪಾಕ್ ಗೆ ರಾಮಮಂದಿರ ವಿಚಾರ ತಲೆಕೆಡಿಸಿದೆ.

ವಿಶ್ವಸಂಸ್ಥೆಗೆ ದೂರು ನೀಡಿದ ಪಾಕ್
ಭಾರತದಲ್ಲಿ ರಾಮಮಂದಿರ ನಿರ್ಮಾಣದಿಂದ ಶಾಂತಿ ದೊಡ್ಡ ಬೆದರಿಕೆಯಾಗಿದೆ ಎಂದು ಪಾಕ್ ಪ್ರತಿನಿಧಿ ಮುನೀರ್ ಅಕ್ರಂ ಪತ್ರ ಬರೆದು ವಿಶ್ವ ಸಂಸ್ಥೆಗೆ ತಕರಾರು ಸಲ್ಲಿಸಿದ್ದಾರೆ. ಭಾರತದಲ್ಲಿನ ರಾಮಂದಿರ ನಿರ್ಮಾಣದಿಂದ ಸ್ಥಳೀಯರ ಶಾಂತಿಗೆ ಭಂಗವಾಗಿದೆ. ಭಾರತದಲ್ಲಿನ ಧಾರ್ಮಿಕ  ಸ್ಥಳಗಳ ರಕ್ಷಣೆಗೆ ವಿಶ್ವ ಸಂಸ್ಥೆ ಮುಂದಾಗಬೇಕು ಎಂದು ಮುನೀರ್ ಪತ್ರದಲ್ಲಿ ಬರೆದಿದ್ದಾರೆ.

ವಾರಣಾಸಿ, ಮಥುರಾದಲ್ಲಿರುವ ಮಸೀದಿಗಳೂ ಇಂತಹ ಅಪವಿತ್ರ ಮತ್ತು ದಾಳಿಯ ಆರೋಪಗಳಿಂದ ಬೆದರಿಕೆ ಎದುರಿಸುತ್ತಿವೆ. ಭಾರತದ ಕೆಲವು ಮಂತ್ರಿಗಳ ಹೇಳಿಕೆ ಪಾಕಿಸ್ತಾನದ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಭಾರತದಲ್ಲಿ ಬಹುಸಂಖ್ಯಾತರಿಂದ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ