ಕಡಲ್ಗಳ್ಳರಿಂದ ಪಾಕಿಸ್ತಾನಿಯರನ್ನು ರಕ್ಷಿಸಿದ ಭಾರತೀಯ ನೌಕಾ ಸೇನೆ

Krishnaveni K

ಮಂಗಳವಾರ, 30 ಜನವರಿ 2024 (11:43 IST)
ನವದೆಹಲಿ: ಸೊಮಾಲಿಯಾದ ಕಡಲ್ಗಳ್ಳರ ಕೈಗೆ ಸಿಲುಕಿದ್ದ 19 ಪಾಕಿಸ್ತಾನಿಯರನ್ನು ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.

ಅರೇಬಿಯನ್ ಸಮುದ್ರದಲ್ಲಿ ಸೊಮಾಲಿ ಕಡಲ್ಗಳ್ಳರ ಪಾಲಾಗಿದ್ದ ಪಾಕಿಸ್ತಾನೀಯರು ಮತ್ತು ಅವರ ಸರಕುಗಳನ್ನು ಭಾರತೀಯ ನೌಕಾ ಸೇನೆಯ ಐಎನ್ಎಸ್ ಸುಮಿತ್ರಾ ಯುದ್ಧ ನೌಕೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.  ಇದು ಎರಡನೇ ಬಾರಿಗೆ ಈ ರೀತಿ ನೌಕಾ ಸೇನೆ ಯಶಸ್ವಿಯಾಗಿ ಕಡಲ್ಗಳ್ಳರಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದಂತಾಗಿದೆ.

ಇದಕ್ಕೆ ಮೊದಲು ಐಎನ್ಎಸ್ ಸುಮಿತ್ರಾ ನೌಕೆ ಸೊಮಾಲಿ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಇರಾನ್ ಮೀನುಗಾರಿಕಾ ಹಡಗನ್ನು ರಕ್ಷಿಸಿತ್ತು. ಈ ಹಡಗಿನಲ್ಲಿ 17 ಭಾರತೀಯ ಮೀನುಗಾರರೂ ಇದ್ದರು. ಇದೀಗ 11 ಸೊಮಾಲಿ ಕಡಲ್ಗಳ್ಳರಿಂದ 19 ಪಾಕಿಸ್ತಾನಿಯರನ್ನು ರಕ್ಷಿಸಿದೆ.

ಇರಾನ್ ಹಡಗು ಅಪಹರಣದ ಬಳಿಕ ಭಾರತೀಯ ಸೇನೆ ಭದ್ರತೆ ಹೆಚ್ಚಿಸಿತ್ತು. ಅಪಾಯಕಾರೀ ಸ್ಥಳಗಳನ್ನು ಗುರುತಿಸಿ 10 ಕ್ಕೂ ಹೆಚ್ಚು ಯುದ್ಧ ನೌಕೆಗಳನ್ನು ನಿಯೋಜಿಸಿತ್ತು. ಇತ್ತೀಚೆಗೆ ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಬಳಿಕ ಕಡಲ್ಗಳ್ಳರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ವಾಣಿಜ್ಯ ಉದ್ದೇಶಕ್ಕೆ ಬರುವ ಹಡುಗುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ