ಎಸ್‌ಸಿಒ ಸಭೆಯಲ್ಲಿ ಮಹತ್ತರವಾದ ಹೇಳಿಕೆ ನೀಡಿದ ಪಾಕಿಸ್ಥಾನ

ಗುರುವಾರ, 24 ಮೇ 2018 (14:24 IST)
ಪಾಕಿಸ್ತಾನ : ಪಾಕಿಸ್ತಾನದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಯಲ್ಲಿ, ಪಾಕಿಸ್ಥಾನವು ಮಹತ್ತರವಾದ ಹೇಳಿಕೆಯೊಂದನ್ನು ನೀಡಿದೆ.


ಈ ಸಭೆಯಲ್ಲಿ ಪಾಕಿಸ್ಥಾನವು ಭಯೋತ್ಪಾದನೆ ನಿರ್ಮೂಲನೆಗೆ ಪ್ರಾದೇಶಿಕ ದೇಶಗಳೊಂದಿಗೆ ಕೈಜೋಡಿಸಲು ಸಿದ್ಧವಿರುವುದಾಗಿ ಹೇಳಿದೆ. ಉಗ್ರರನ್ನು ಪಾಕ್‌ ಪೋಷಿಸುತ್ತಿದೆ ಎಂಬ ಕಾರಣಕ್ಕೆ 2016ರಲ್ಲಿ ಸಾರ್ಕ್‌ ಸಮ್ಮೇಳನದಲ್ಲಿ ಭಾರತ ಭಾಗವಹಿಸಿರಲಿಲ್ಲ. ಆದರೆ ಇದೀಗ ಎಸ್‌ಸಿಒ ಸಭೆಗೆ ಭಾರತ ಕೂಡ  ಹಾಜರಾಗಿದೆ.


ಈ ಸಭೆಯಲ್ಲಿ ಭಾರತ, ಚೀನ, ಕಜಕಿಸ್ಥಾನ ಕಿರ್ಗಿಸ್ತಾನ, ರಷ್ಯಾ, ತಜಿಕಿಸ್ಥಾನ‌, ಉಜ್ಬೆಕಿಸ್ಥಾನದ ಪ್ರತಿನಿಧಿಗಳು ಕೂಡ ಭಾಗವಹಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ