‘ಎಲ್ಲಕ್ಕಿಂತ ಮೊದಲು ನನ್ನಮ್ಮ ಭಾರತೀಯಳು’ ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

ಶುಕ್ರವಾರ, 11 ಮೇ 2018 (08:03 IST)
ಬೆಂಗಳೂರು: ಕಾಂಗ್ರೆಸ್ ಹಿರಿಯ ಧುರೀಣೆ ಸೋನಿಯಾ ಗಾಂಧಿಯವರ ವಿದೇಶೀ ಮೂಲ ಉಲ್ಲೇಖಿಸಿ ಟಾಂಗ್ ಕೊಟ್ಟ ಪ್ರಧಾನಿ ಮೋದಿಗೆ ಪುತ್ರ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ಕೊಟ್ಟಿದ್ದಾರೆ.

ನಾನು ನೋಡಿರುವ ಎಲ್ಲಾ ಭಾರತೀಯರಿಗಿಂತ ನನ್ನಮ್ಮನಲ್ಲಿ ಹೆಚ್ಚು ಭಾರತೀಯತೆ ಇದೆ. ಆಕೆ ಭಾರತೀಯಳು ಎಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

‘ನನ್ನ ಅಮ್ಮನ ಮೂಲ ಇಟೆಲಿ ಇರಬಹುದು. ಆದರೆ ಆಕೆ ಜೀವನದ ಬಹುಭಾಗವನ್ನು ಇಲ್ಲೇ ಕಳೆದಿದ್ದಾಳೆ. ದೇಶಕ್ಕಾಗಿ ತ್ಯಾಗ ಮಾಡಿದ್ದಾಳೆ, ಪರಿಶ್ರಮಪಟ್ಟಿದ್ದಾಳೆ. ಆಕೆಯ ಮೇಲೆ ವೈಯಕ್ತಿಕ ಕಾಮೆಂಟ್ ಮಾಡುವುದು ಪ್ರಧಾನಿಯ ಗುಣಮಟ್ಟ ಎಂತಹದ್ದು ಎಂದು ತೋರಿಸುತ್ತದೆ’ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ