ಪಾಕಿಸ್ತಾನಿಯರಿಗೆ ಈಗ ಇರಾನ್ ಏರ್ ಸ್ಟ್ರೈಕ್ ಭಯ

Krishnaveni K

ಶುಕ್ರವಾರ, 19 ಜನವರಿ 2024 (13:48 IST)
ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವವಾಗುತ್ತಿದ್ದು, ಇಸ್ಲಾಮಾಬಾದ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ತನ್ನ ನೆಲದಲ್ಲಿರುವ ಉಗ್ರ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ್ದರಿಂದ ಸಿಟ್ಟಿಗೆದ್ದ ಪಾಕಿಸ್ತಾನ ಪ್ರತೀಕಾರವಾಗಿ ವೈಮಾನಿಕ ದಾಳಿ ನಡೆಸಿತ್ತು. ಇದರಿಂದ ಕೆಲವರು ಸಾವನ್ನಪ್ಪಿದ್ದರು.

ಇದರ ನಡುವೆಯೇ ಈಗ ಇರಾನ್ ಪ್ರತಿ ದಾಳಿ ನಡೆಸುವ ಭಯ ಪಾಕಿಸ್ತಾನಕ್ಕಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಿದೆ. ನಾವು ಉಗ್ರರ ಇರುವಿಕೆ ಬಗ್ಗೆ ಮಾಹಿತಿ ನೀಡಿದರೂ ಸೈರಣೆ ಪಾಲಿಸದೇ ಇರಾನ್ ದಾಳಿ ನಡೆಸಿದೆ ಎಂಬುದು ಪಾಕ್ ಆರೋಪ.

ಇದೀಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಬಿಕ್ಕಟ್ಟು ಏಷ್ಯಾಗೂ ಕಾಲಿಟ್ಟಂತಾಗಿದೆ. ಇದೀಗ ಪಾಕ್ ನೆಲದಲ್ಲಿ ಇರಾನ್ ದಾಳಿ ನಡೆಸಿದ್ದನ್ನು ಅಮೆರಿಕಾ ಖಂಡಿಸಿತ್ತು. ಇತ್ತ ಭಾರತ ಈ ವಿಚಾರದಲ್ಲಿ ಇರಾನ್ ಪರವಾಗಿದ್ದರೆ, ಚೀನಾ ತಟಸ್ಥ ನೀತಿ ಅನುಸರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ