ಘಟನೆಯ ಸಮಯದಲ್ಲಿ ಮನೆಯ ನೌಕರರಾದ ರಶೀದ್, ಅಮ್ಜಾದ್ ಮತ್ತು ಫರ್ಜಾನಾ ಉಪಸ್ಥಿತರಿದ್ದರು. ನಾನು ಮನೆಯಿಂದ ಹೊರಬರಲು ಪ್ರಯತ್ನಿಸಿದಾಗ ನನ್ನ ಗಂಡನು ಮ್ಯಾನ್ಹೋಲ್ ಹೊದಿಕೆಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ನನ್ನ ಗಂಡನೇ ನನ್ನ ತಲೆಯನ್ನು ಬೋಳಿಸಿದ್ದಾನೆ. ಆದರೆ, ನನ್ನ ಗೆಳತಿ ಬಂದು ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾಳೆ. ಪೊಲೀಸರಿಗೆ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಕೋರಿದಾಗ 5,000 ರೂಪಾಯಿ ಲಂಚ ಕೇಳಿದ್ದಾರೆ ಎಂದು ಆಸ್ಮಾ ಆರೋಪಿಸಿದ್ದಾಳೆ.