ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!

ಶನಿವಾರ, 16 ಸೆಪ್ಟಂಬರ್ 2023 (14:51 IST)
ಇಸ್ಲಮಾಬಾದ್ : ಹೆಚುತ್ತಿರುವ ಆರ್ಥಿಕ ಸವಾಲುಗಳ ನಡುವೆ ಪಾಕಿಸ್ತಾನ ಶುಕ್ರವಾರ ಪೆಟ್ರೋಲ್ ಮತ್ತು ಹೈಸ್ಪೀಡ್ ಡೀಸೆಲ್ ಬೆಲೆಯನ್ನು ಏರಿಸಿದೆ.
 
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ಗೆ 26.02 ಪಿಕೆಆರ್ (ಅಂದಾಜು 7.28 ರೂ.) ಏರಿಕೆ ಮಾಡಿದ್ದು, ಹೈಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 17.34 ಪಿಕೆಆರ್ (ಅಂದಾಜು 4.85 ರೂ.) ಏರಿಕೆ ಮಾಡಿದೆ. 

ಪಾಕಿಸ್ತಾನದಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 333.38 ಪಿಕೆಆರ್ (ಅಂದಾಜು 93.26 ರೂ.) ಮಾರಾಟ ಮಾಡುತ್ತಿದ್ದು, ಹೈಸ್ಪೀಡ್ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 329.18 ಪಿಕೆಆರ್ (ಅಂದಾಜು 92.09 ರೂ.) ಆಗಿದೆ. 

ಇತ್ತೀಚಿನ ಆರ್ಥಿಕ ಸುಧಾರಣೆಗಳಿಂದ ಐತಿಹಾಸಿಕವಾಗಿ ಹೆಚ್ಚಿನ ಹಣದುಬ್ಬರ ಮತ್ತು ಬಡ್ಡಿದರಗಳ ಏರಿಕೆಯಿಂದಾಗಿ ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ವಿದ್ಯುತ್ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ