ಭಾರತದ ವಿರುದ್ಧ ಒಂದೇ ಪಂದ್ಯದಲ್ಲಿ ಪಾಕಿಸ್ತಾನದ ಮೂವರಿಗೆ ಗಾಯ

ಮಂಗಳವಾರ, 12 ಸೆಪ್ಟಂಬರ್ 2023 (17:08 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಭಾರತದ ವಿರುದ್ಧದ ಒಂದೇ ಪಂದ್ಯದಲ್ಲಿ ಪಾಕಿಸ್ತಾನದ ಮೂವರು ಆಟಗಾರರಿಗೆ ಗಾಯವಾಗಿದೆ.

ಫೀಲ್ಡಿಂಗ್ ವೇಳೆ ಬೌಲರ್ ಹ್ಯಾರಿಸ್ ರೌಫ್, ನಸೀಂ ಶಾ ಗಾಯಗೊಂಡರು. ಇದರಿಂದಾಗಿ ಅವರು ಮತ್ತೆ ಬ್ಯಾಟಿಂಗ್ ಗಿಳಿದಿರಲಿಲ್ಲ. ವೇಗಿ ಶಾಹಿನ್ ಅಫ್ರಿದಿ ಕೂಡಾ ಕೈ ಬೆರಳಿಗೆ ಗಾಯ ಮಾಡಿಕೊಂಡರೂ ಬಳಿಕ ಬ್ಯಾಟಿಂಗ್ ಗೆ ಬಂದು ತಾವು ಆರಾಮವಾಗಿರುವುದಾಗಿ ಸಂದೇಶ ನೀಡಿದರು.

ಆದರೆ ಬ್ಯಾಟಿಂಗ್ ವೇಳೆ ಬ್ಯಾಟಿಗ ಸಲ್ಮಾನ್ ಅಘಾ ಮುಖಕ್ಕೆ ಗಂಭೀರ ಗಾಯ ಮಾಡಿಕೊಂಡರು. ರವೀಂದ್ರ ಜಡೇಜಾರ ಸ್ಪಿನ್ ಎಸೆತ ಎದುರಿಸುವಾಗ ಹೆಲ್ಮೆಟ್ ಧರಿಸದೇ ಆಡುತ್ತಿದ್ದ ಅವರಿಗೆ ಬಾಲ್ ಮುಖಕ್ಕೆ ತಗುಲಿ ರಕ್ತ ಸುರಿಯಲು ಆರಂಭವಾಗಿತ್ತು. ಬಳಿಕ ತಂಡದ ವೈದ್ಯರು ಚಿಕಿತ್ಸೆ ನೀಡಿದರು. ಬಳಿಕ ಅವರು ಬ್ಯಾಟಿಂಗ್ ಗೆ ಮರಳಿದರು. ಈ ಮೂಲಕ ಒಂದೇ ಪಂದ್ಯದಲ್ಲಿ ಪಾಕಿಸ್ತಾನದ ಮೂವರು ಆಟಗಾರರು ಗಾಯಗೊಂಡಂತಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ