ಟೀಂ ಇಂಡಿಯಾ ಗೆಲುವು ಪಾಕ್ ಗೆ ಲಾಭ: ಭಾರತ-ಪಾಕ್ ಫೈನಲ್ ಗ್ಯಾರಂಟಿ?

ಬುಧವಾರ, 13 ಸೆಪ್ಟಂಬರ್ 2023 (09:35 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ನಿನ್ನೆಯ ಸೂಪರ್ ಫೋರ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿ ಫೈನಲ್ ಗೆ ಅರ್ಹತೆ ಪಡೆದಿದೆ. ಆದರೆ ಈ ಗೆಲುವಿನಿಂದ ಪಾಕಿಸ್ತಾನ ತಂಡಕ್ಕೂ ಲಾಭವಾಗಿದೆ.

ಒಂದು ವೇಳೆ ನಿನ್ನೆ ಭಾರತ ಸೋತಿದ್ದರೆ ಪಾಕಿಸ್ತಾನದ ಫೈನಲ್ ಹಾದಿ ಕಷ್ಟವಾಗುತ್ತಿತ್ತು. ಭಾರತ ಮುಂದೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಗೆದ್ದರೆ ಲಂಕಾ-ಭಾರತ ಫೈನಲ್ ಗೆ ತಲುಪುತ್ತಿತ್ತು. ಆದರೆ ಈಗ ಭಾರತ ಗೆದ್ದಿರುವುದರಿಂದ ಪಾಕಿಸ್ತಾನಕ್ಕೆ ಮತ್ತೊಂದು ಸುವರ್ಣಾವಕಾಶ ಎದುರಾಗಿದೆ.

ಇಂದು ನಡೆಯಲಿರುವ ಲಂಕಾ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಗೆದ್ದರೆ ಅದರ ಫೈನಲ್ ಹಾದಿ ಸುಗಮವಾಗಲಿದೆ. ಹೀಗಾದಲ್ಲಿ ಈ ಟೂರ್ನಮೆಂಟ್ ನಲ್ಲಿ ಮತ್ತೊಮ್ಮೆ ಭಾರತ-ಪಾಕ್ ಮುಖಾಮುಖಿಯಾಗಲಿದೆ. ಒಂದು ವೇಳೆ ಇಂದು ಪಾಕಿಸ್ತಾನ ಸೋತರೆ ಶ್ರೀಲಂಕಾಗೆ ಫೈನಲ್ ಅವಕಾಶ ಸಿಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ