ಪಾಕಿಸ್ತಾನ ವಿರುದ್ಧ ರೋಚಕ ಜಯ: ಟೀಂ ಇಂಡಿಯಾ ವಿರುದ್ಧ ಫೈನಲ್ ಗೆ ಶ್ರೀಲಂಕಾ

ಶುಕ್ರವಾರ, 15 ಸೆಪ್ಟಂಬರ್ 2023 (08:30 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ರೋಚಕವಾಗಿ ಮಣಿಸಿದ ಶ್ರೀಲಂಕಾ ಫೈನಲ್ ಗೇರಿದೆ.

ಟೀಂ ಇಂಡಿಯಾ ಮೊದಲನೆಯ ತಂಡವಾಗಿ ಫೈನಲ್ ಗೇರಿತ್ತು. ಇದೀಗ ಲಂಕಾ ಇನ್ನೊಂದು ತಂಡವಾಗಿ ಫೈನಲ್ ಗೇರಿದೆ. ನಿನ್ನೆ ಮಳೆಯಿಂದಾಗಿ 42 ಓವರ್ ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತ್ತು.

ಈ ಮೊತ್ತ ಬೆನ್ನತ್ತಿದ ಲಂಕಾ ಕುಶಲ್ ಮೆಂಡಿಸ್ ಗಳಿಸಿದ 91 ರನ್ ಗಳ ನೆರವಿನಿಂದ 42 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಗೆಲುವು ಕಂಡಿತು. ಇದರೊಂದಿಗೆ ಏಷ್ಯಾ ಕಪ್ ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ