ಲಂಡನ್ ಗೆ ತೆರಳಿದ ಪ್ರಧಾನಿ ಮೋದಿ ವಿಜಯ್ ಮಲ್ಯ ಬಗ್ಗೆ ಬ್ರಿಟನ್ ಪ್ರಧಾನಿ ಜತೆ ಚರ್ಚೆ
ಭಾರತದ ವಿವಿಧ ಬ್ಯಾಂಕ್ ಗಳಲ್ಲಿ 9000 ಕೋಟಿ ರೂ. ಗಳಷ್ಟು ಸಾಲ ಮಾಡಿ ಬ್ರಿಟನ್ ಗೆ ಪಲಾಯನಗೈದಿರುವ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಈ ಮೊದಲೂ ಹಲವು ಬಾರಿ ಮಾತುಕತೆ ನಡೆದಿತ್ತು.
ಲಂಡನ್ ನಲ್ಲಿರುವ ಮಲ್ಯ ಅಲ್ಲಿ ಎರಡು ಬಾರಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈಗಾಗಲೇ ಮಲ್ಯ ಹಸ್ತಾಂತರಕ್ಕೆ ಭಾರತ ದೋಷಾರೋಪ ಪಟ್ಟಿ ಒದಗಿಸಿತ್ತು. ಇದೀಗ ಅದೇ ವಿಚಾರವಾಗಿ ಪ್ರಧಾನಿ ಮೋದಿ ಮತ್ತು ಥೆರೆಸಾ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ವಿವರಗಳು ಬಹಿರಂಗವಾಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.