ಸ್ಟ್ರಾಬೆರಿ ಹಣ್ಣಿಗೆ ಸೂಜಿ ಚುಚ್ಚಿ ಕಲಬೆರಕೆಗೊಳಿಸಿದ ಮಹಿಳೆಯ ಮೇಲೆ ಚಾರ್ಜ್‌ಶೀಟ್ ದಾಖಲಿಸಿದ ಪೊಲೀಸರು

ಬುಧವಾರ, 14 ನವೆಂಬರ್ 2018 (13:35 IST)
ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ಸ್ಟ್ರಾಬೆರಿ ಹಣ್ಣಿಗೆ ಸೂಜಿ ಚುಚ್ಚುವ ಮೂಲಕ ಕಲಬೆರಕೆಗೊಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ 50 ವರ್ಷದ ಮಹಿಳೆಯೊಬ್ಬರ ಮೇಲೆ ಪೊಲೀಸರು ಚಾರ್ಜ್‌ಶೀಟ್ ದಾಖಲಿಸಿದ್ದಾರೆ.


ಈ ಸ್ಟ್ರಾಬೆರಿ ಹಣ್ಣಿಗೆ ಸೂಜಿ ಚುಚ್ಚಿ ಕಲಬೆರಕೆಗೊಳಿಸುವ ವಿಚಾರದ ಕುರಿತು ಈ ಹಿಂದೆ ಸುಮಾರು 200 ರಷ್ಟು ದೂರುಗಳು ಬಂದಿದ್ದವು. ಇದರಿಂದ ಸೂಪರ್‌ ಮಾರ್ಕೆಟ್‌ ಗಳು ಸ್ಟ್ರಾಬೆರಿ ಹಣ್ಣುಗಳನ್ನು ವಾಪಸ್ ಮಾಡಿದ ಕಾರಣ ಸ್ಟ್ರಾಬೆರಿ ಬೆಳೆಗಾರರು ಹಣ್ಣುಗಳಿಗೆ ಬೇಡಿಕೆಯಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.


ಇದೀಗ ಮೊದಲ ಬಾರಿಗೆ 50 ವರ್ಷದ ಮಹಿಳೆಯೊಬ್ಬರ ಮೇಲೆ ಆರೋಪಪಟ್ಟಿ ದಾಖಲಾಗಿದೆ. ಈಕೆ ಕಲಬೆರಕೆ ಆರೋಪಕ್ಕೆ ತುತ್ತಾದ ಸ್ಟ್ರಾಬೆರಿ ಬ್ರಾಂಡ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಯಾಗಿದ್ದು, ಈ ಮಹಿಳೆಯ ಮೇಲೆ 7 ಕೇಸ್‌ಗಳು ದಾಖಲಾಗಿವೆ ಎಂಬುದಾಗಿ ತಿಳಿದುಬಂದಿದೆ. ಈಗ ಈಕೆಯ ಮೇಲಿನ ಆರೋಪ ಸಾಬೀತಾದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವುದು ಖಚಿತ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ