ಟೆಸ್ಟ್ ಆಡಲು ಟಿ20 ಕೈ ಬಿಡ್ತಾರಾ ರೋಹಿತ್ ಶರ್ಮಾ?!
ನವಂಬರ್ 21 ರಿಂದ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಆದರೆ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಅವಕಾಶ ಪಡೆದಿರುವ ರೋಹಿತ್ ಈ ಸರಣಿಗೆ ಸಜ್ಜಾಗಲು ಭಾರತ ಎ ತಂಡದ ಪರ ಟೆಸ್ಟ್ ಆಡಲಿದ್ದಾರೆ.
ನ್ಯುಜಿಲೆಂಡ್ ವಿರುದ್ಧ ನ.16 ರಿಂದ 19 ರವರೆಗೆ ಟೆಸ್ಟ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರಷ್ಟೇ ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಗೆ ಅವಕಾಶ ಸಿಗಲಿದೆ. ಈ ಪಂದ್ಯಗಳ ನಡುವೆ ಕೇವಲ 2 ದಿನಗಳ ಅಂತರವಿದೆಯಷ್ಟೇ. ಹೀಗಾಗಿ ನ್ಯೂಜಿಲೆಂಡ್ ನಿಂದ ಆಸ್ಟ್ರೇಲಿಯಾಗೆ ಬಂದು ಈ ಪಂದ್ಯದಲ್ಲಿ ಆಡುವುದು ರೋಹಿತ್ ಗೆ ಕಷ್ಟವಾಗಲಿದೆ. ಹಾಗಾಗಿ ಬಹುತೇಕ ಟಿ20 ಪಂದ್ಯಕ್ಕೆ ರೋಹಿತ್ ಕೈ ಕೊಡುವ ಸಾಧ್ಯತೆ ಹೆಚ್ಚು.