10 ದಿನ ಮುಂಚಿತವಾಗಿ ಚೀನಾದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪರೀಕ್ಷೆ
ಗುರುವಾರ, 28 ಮೇ 2020 (10:14 IST)
ನವದೆಹಲಿ : ಭಾರತದಲ್ಲಿರುವ ಚೀನಾದ ವಿದ್ಯಾರ್ಥಿಗಳನ್ನು ತಮ್ಮ ದೇಶಕ್ಕೆ ಕಳುಹಿಸಲು ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ನಿಗದಿತ ಸಮಯಕ್ಕಿಂತ 10ದಿನ ಮುಂಚಿತವಾಗಿ ಚೀನಾದ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪರೀಕ್ಷೆ ಮಾಡಲು ತೀರ್ಮಾನಿಸಿದೆ.
ಮೈಸೂರು ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ 80ಕ್ಕೂ ಹೆಚ್ಚು ಚೀನಾ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆಲ್ಲಾ ಜೂ.15ರಂದು ಸ್ನಾತಕೊತ್ತರ ಪದವಿ ಪರೀಕ್ಷೆ ನಿಗದಿಯಾಗಿತ್ತು.ಆದರೆ ಇದೀಗ 10 ದಿನ ಮೊದಲೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಚೀನಾ ರಾಯಭಾರಿ ಕಚೇರಿ ಮನವಿ ಮೇರೆಗೆ ಈ ತೀರ್ಮಾನ ಕೈಗೊಂಡಿರುವುದಾಗಿ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.