ಅಮೆರಿಕದ ಹೌಸ್ ಆಫ್ ಸ್ಪೀಕರ್ಗೆ ನಿರ್ಬಂಧ

ಶನಿವಾರ, 6 ಆಗಸ್ಟ್ 2022 (11:13 IST)
ವಾಷಿಂಗ್ಟನ್ : ತೈವಾನ್ ವಿಚಾರದಲ್ಲಿ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿರುವ ಚೀನಾ, ಕಂಡಕಂಡವರ ಮೇಲೆಲ್ಲಾ ಎಗರಾಡುತ್ತಿದೆ.
 
ಜಿ-7 ರಾಷ್ಟ್ರಗಳು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಕೆನಡಾ ಕೂಡ ಪಾಲ್ಗೊಂಡಿದ್ದಕ್ಕೆ ಚೀನಾ ಗರಂ ಆಗಿದೆ. ಕೆನಡಾ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ವ್ಯಕ್ತಪಡಿಸಿದೆ. ತೈವಾನ್ ವಿಚಾರದಲ್ಲಿ ಕೆನಡಾ ತನ್ನ ತಪ್ಪು ಸರಿ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದೆ.

ಇಂದು ಬೆಳಗ್ಗೆ ಚೀನಾ ತನ್ನ ಪ್ರಮುಖ ದ್ವೀಪದ ಮೇಲೆ ದಾಳಿಯನ್ನು ಅನುಕರಿಸುತ್ತದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ. 

ಅಮೆರಿಕದ ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಫೆಲೊಸಿ ಅವರ ಭೇಟಿ ವಿರುದ್ಧ ತನ್ನ ಆಕ್ರೋಶ ಮುಂದುವರಿಸಿರುವ ಚೀನಾ, ಇದೀಗ ನ್ಯಾನ್ಸಿ ಫೆಲೊಸಿ ವಿರುದ್ಧ ನಿರ್ಬಂಧ ವಿಧಿಸಿದೆ. ನಿನ್ನೆಯಷ್ಟೇ `ಅಮೆರಿಕದ ಅಧಿಕಾರಿಗಳು ತೈವಾನ್ಗೆ ಭೇಟಿ ನೀಡುವುದನ್ನು ತಡೆಯಲು, ನಮ್ಮಮ್ಮು ಪ್ರತ್ಯೇಕಿಸಲು ಸಾಧ್ಯವೇ ಇಲ್ಲ’ ಎಂದು ವಾದಿಸಿದ್ದರು.

ಅಲ್ಲದೇ ಅಮೆರಿಕದ ಜೊತೆಗಿನ ರಕ್ಷಣಾ, ಹವಾಮಾನ ಬದಲಾವಣೆ ಕುರಿತ ಮಾತುಕತೆ ರದ್ದುಪಡಿಸಿರುವುದಾಗಿಯೂ ಚೀನಾ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ