ಬಿಬಿಸಿ ಮುಖ್ಯಸ್ಥ ಹುದ್ದೆಗೆ ರಿಚರ್ಡ್ ಶಾರ್ಪ್ ರಾಜೀನಾಮೆ
ಇಂಗ್ಲೆಂಡ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ 8 ಲಕ್ಷ ಪೌಂಡ್ (ಅಂದಾಜು 8.15 ಕೋಟಿ ರೂ.) ಸಾಲದ ಗ್ಯಾರಂಟಿ ನೀಡಲು ರಿಚರ್ಡ್ ಶಾರ್ಪ್ ನೆರವಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು
ಕೆಲ ತಿಂಗಳ ಹಿಂದೆ ಸಂಡೆ ಟೈಮ್ಸ್ ರಿಚರ್ಡ್ ಶಾರ್ಪ್ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಬೋರಿಸ್ ಜಾನ್ಸನ್ ಮತ್ತು ರಿಚರ್ಡ್ ಶಾರ್ಪ್ ವಿರುದ್ಧ ಟೀಕೆ ವ್ಯಕ್ತವಾಗಿತ್ತು.
ಹೊಸ ಮುಖ್ಯಸ್ಥರ ಆಯ್ಕೆಯಾಗುವವರೆಗೂ ರಿಚರ್ಡ್ ಶಾರ್ಪ್ ಮುಖ್ಯಸ್ಥರಾಗಿಯೇ ಮುಂದುವರಿಯಲಿದ್ದಾರೆ.