ಯುದ್ಧ ವಿರಾಮದ ಮಾತುಕತೆ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ತವರಿನ ಮೇಲೆ ರಷ್ಯಾ ದಾಳಿ: 18 ಮಂದಿ ಸಾವು

Sampriya

ಶನಿವಾರ, 5 ಏಪ್ರಿಲ್ 2025 (13:09 IST)
Photo Courtesy X
ಉಕ್ರೇನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ- ಉಕ್ರೇನ್‌ ಯುದ್ಧದಲ್ಲಿ ಕದನ ವಿರಾಮಕ್ಕೆ ಒತ್ತಾಯಿಸಿರುವ ಹೊತ್ತಿನಲ್ಲೇ ರಷ್ಯಾವು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ತವರು ನೆಲದ ಮೇಲೆ  ದಾಳಿ ನಡೆಸಿದೆ. ಇದು ಈ ವರ್ಷದ ಮಾಸ್ಕೋದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದೆ.

ಝೆಲೆನ್ಸ್ಕಿ ತವರೂರು ಕ್ರಿವಿ ರಿಹ್‌ನ ವಸತಿ ಪ್ರದೇಶದ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಂಬತ್ತು ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ. ಹಲವು ಕಟ್ಟಡಗಳು ಧ್ವಂಸಗೊಂಡಿವೆ.

ಘಟನೆಯಲ್ಲಿ  50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಮೂರು ತಿಂಗಳ ಮಗು ಸೇರಿದಂತೆ 30 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ರಾತ್ರಿ ಪೂರ್ತಿ ರಷ್ಯಾ ಉಡಾಯಿಸಿದ 92 ಡ್ರೋನ್‌ಗಳ ಪೈಕಿ 51 ಅನ್ನು ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ಉಕ್ರೇನ್‌ ಹೇಳಿದೆ. ರಷ್ಯಾ ದಾಳಿಯಿಂದಾಗಿ ಕೀವ್‌, ಜೈಟೊಮಿರ್‌, ಸುಮಿ ಪ್ರದೇಶಗಳಲ್ಲಿ ಭಾರೀ ಹಾನಿಯಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ