ಹಡಗು ಮುಳುಗಿ 10 ಸಾವು, 60 ಜನ ನಾಪತ್ತೆ!

ಸೋಮವಾರ, 10 ಅಕ್ಟೋಬರ್ 2022 (06:36 IST)
ಅಬುಜಾ : ಹಡಗೊಂದು ಮುಳುಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ 10 ಜನರು ಸಾವನ್ನಪ್ಪಿದ್ದು, ಸುಮಾರು 60 ಜನರು ನಾಪತ್ತೆಯಾಗಿರುವ ಘಟನೆ ನೈಜೀರಿಯಾದ  ಅನಂಬ್ರಾ ರಾಜ್ಯದಲ್ಲಿ ನಡೆದಿದೆ.

ವರದಿಗಳ ಪ್ರಕಾರ ಹಡಗಿನಲ್ಲಿ 85 ಜನರಿದ್ದರು. ಭಾರೀ ಅಲೆಗಳ ನಡುವೆ ಹಡಗು ಮುಳುಗಿದ್ದು, ಅದರಲ್ಲಿದ್ದ 10 ಜನರು ಸಾವನ್ನಪ್ಪಿದ್ದಾರೆ. 60 ಜನ ನಾಪತ್ತೆಯಾಗಿದ್ದು, ಅವರ ರಕ್ಷಣೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಇದು ಸ್ಥಳೀಯವಾಗಿ ತಯಾರಿಸಲಾದ ಹಡಗಾಗಿದ್ದು, ಸಮುದ್ರಕ್ಕೆ ಇಳಿದ ಕೆಲವೇ ಹೊತ್ತಿನಲ್ಲಿ ಅದರ ಎಂಜಿನ್ ಹಾಳಾಗಿದೆ. ಬಳಿಕ ಭಾರೀ ಪ್ರಮಾಣದ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದೆ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ