ವಿಶ್ವವೇ ಕಾಯುತ್ತಿದ್ದ ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿ: ವೈದ್ಯಕೀಯ ವಿಜ್ಞಾನದಲ್ಲಿ ರಷ್ಯಾ ಮಹತ್ವದ ಸಾಧನೆ

Sampriya

ಬುಧವಾರ, 18 ಡಿಸೆಂಬರ್ 2024 (14:38 IST)
Photo Courtesy X
ಮಾಸ್ಕೋ:‌ ರಷ್ಯಾ ದೇಶವು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ರಷ್ಯಾದ ಆರೋಗ್ಯ ಸಚಿವಾಲಯವು ಕ್ಯಾನ್ಸರ್‌ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದೆ. ಮಾತ್ರವಲ್ಲ, ಶೀಘ್ರದಲ್ಲೇ ತನ್ನ ದೇಶದ ನಾಗರಿಕರಿಗೆ ಉಚಿತವಾಗಿ ನೀಡುವುದಾಗಿ ಹೇಳಿದೆ.

 ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೇ ಕಪ್ರಿನ್ ಈ ಕುರಿತು ಮಾಹಿತಿ ನೀಡಿದ್ದು, ಕ್ಯಾನ್ಸರ್ ಲಸಿಕೆ ತಯಾರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.

ಮುಂದಿನ ವರ್ಷದಿಂದಲೇ ರಷ್ಯಾದ ನಾಗರಿಕರಿಗೆ ಈ ಕ್ಯಾನ್ಸರ್‌ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಈ ಆವಿಷ್ಕಾರ ಶತಮಾನದ ಅತಿದೊಡ್ಡ ಆವಿಷ್ಕಾರವೆಂದು ಬಣ್ಣಿಸಿರುವ ಆಂಡ್ರೇ, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಇದು ಗೆಡ್ಡೆಯ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ ಎಂದು ವಿವರಿಸಿದ್ದಾರೆ.

ಈ ವರ್ಷಾರಂಭದಲ್ಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಅವರು ಕ್ಯಾನ್ಸರ್‌ ಲಸಿಕೆ ತಯಾರಿಸಲು ರಷ್ಯಾ ಬಹಳ ಸಮೀಪದಲ್ಲಿದೆ ಎಂದು ಹೇಳಿದ್ದರು.  

ಈ ಲಸಿಕೆಯಿಂದ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಅಗತ್ಯವಾದ ಪ್ರೋಟೀನ್‌ಗಳನ್ನು ಪಡೆಯುತ್ತವೆ, ಪ್ರತಿಕಾಯ (ಆಂಟಿಬಾಡಿ) ರೂಪುಗೊಳ್ಳುತ್ತವೆ. ಇದರೊಂದಿಗೆ ರೋಗನಿರೋಧಕ ಶಕ್ತಿತಯೂ ಬಲಗೊಳ್ಳುತ್ತದೆ. ಕ್ಯಾನ್ಸರ್‌ ಲಸಿಕೆಯು ಎಂಆರ್‌ಎನ್‌ಎ ತಂತ್ರಜ್ಞಾನ ಆಧರಿಸಿದ ಮೊದಲ ಲಸಿಕೆಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ