ಚರ್ಚೆ ನನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ : ಮಸ್ಕ್

ಮಂಗಳವಾರ, 26 ಜುಲೈ 2022 (10:32 IST)
ವಾಷಿಂಗ್ಟನ್ : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಬಗ್ಗೆ ಇತ್ತೀಚೆಗೆ ಹಲವು ಚರ್ಚೆಗಳು ನಡೆಯುತ್ತಿದೆ.
 
ಈ ಹಿನ್ನೆಲೆ ಅಸಮಾಧಾನಗೊಂಡ ಮಸ್ಕ್ ಟ್ವೀಟ್ ಮಾಡುವ ಮೂಲಕ ತಮ್ಮ ಮುಖ್ಯ ಉದ್ದೇಶವನ್ನು ಹೇಳಿಕೊಂಡಿದ್ದಾರೆ.

ಟ್ವೀಟ್ ಮಾಡಿದ ಮಸ್ಕ್, ಎಲ್ಲರಿಗೂ ನನ್ನ ಮೇಲೆಯೇ ಗಮನವಿದೆ. ಈ ರೀತಿಯ ಗಮನ ನನ್ನನ್ನು ಕುಗ್ಗಿಸುವಂತೆ ಮಾಡುತ್ತೆ. ದುರದೃಷ್ಟವಶಾತ್, ಇತ್ತೀಚೆಗೆ ನನ್ನ ಬಗ್ಗೆ ಕ್ಷುಲ್ಲಕ ಸುದ್ದಿಗಳು ಕೇಳಿಬರುತ್ತಿದೆ.

ಇದು ನನ್ನಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸುತ್ತವೆ. ಆದರೆ ನಾನು ನಾಗರಿಕರಿಗೆ ಉಪಯುಕ್ತವಾದ ಕೆಲಸಗಳ ಕಡೆ ಗಮನಹರಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ