ಕುವೈಟ್ : ತಮ್ಮ ದೇಶದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಲು ಕುವೈಟ್ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಹೊಸ ಕಾನೂನನ್ನು ಜಾರಿಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
ವಿದೇಶಗಳಿಂದ ಉದ್ಯೋಗಕ್ಕಾಗಿ ವಲಸೆ ಬಂದವರಿಗೆ ಸಂಬಂಧಪಟ್ಟ ಕಾನೂನು ಇದಾಗಿದ್ದು, ಇದಕ್ಕಾಗಿ ಈಗಾಗಲೇ ಒಂದು ಸಮಿತಿಯನ್ನು ರಚಿಸಲಾಗಿದೆ. ಆ ಸಮಿತಿ ತನ್ನ ಶಿಫಾರಸ್ಸುಗಳನ್ನು ಕೂಡ ಸರ್ಕಾರದ ಮುಂದಿಟ್ಟಿದೆ. ಕುವೈಟ್ ವಲಸಿಗರ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಆದಕಾರಣ ಈ ಹೊಸ ಕಾನೂನಿನ ಪ್ರಕಾರ ಭಾರತೀಯರ ಸಂಖ್ಯೆ ದೇಶದ ಜನಸಂಖ್ಯೆಗಿಂತ ಶೇ.15 ಮೀರಬಾರದು ಎನ್ನಲಾಗಿದೆ. ಇದರಿಂದ ಭಾರತೀಯರ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು, ಲಕ್ಷಗಟ್ಟಲೆ ಭಾರತೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.