ಕೊರೊನಾ ಲಕ್ಷಣಗಳಿಲ್ಲದಿದ್ರೆ ಹೋಂ ಐಸೋಲೇಷನ್; ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಶನಿವಾರ, 4 ಜುಲೈ 2020 (10:21 IST)
ಬೆಂಗಳೂರು : ಕೊರೊನಾ ಲಕ್ಷಣಗಳಿಲ್ಲದಿದ್ರೆ ಹೋಂ ಐಸೋಲೇಷನ್ ಗೆ(ಮನೆಯಲ್ಲೇ ಚಿಕಿತ್ಸೆ ಪಡೆಯಲು )ಷರತ್ತಿನ ಮೇರೆಗೆ ಒಪ್ಪಿಗೆ ನೀಡಲಾಗುವುದು.

ತಜ್ಞರ ಸಲಹೆಯಂತೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು,   ಕಡಿಮೆ ಜ್ವರ ಲಕ್ಷಣದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುವುದು. ಗರ್ಭಿಣಿಯರು 50 ವರ್ಷ ಮೇಲ್ಪಟ್ಟವರು ಅಸ್ವಸ್ಥರಾದರೆ ಹೋಂ ಐಸೋಲೇಷನ್ ಇಲ್ಲ.  ಎಸಿಂಪಮಾಟಿಕ್ ರೋಗಿಗಳಿಗೆ ಹೋಂ ಐಸೋಲೇಷನ್ ಗೆ ಅನುಮತಿ ನೀಡಲಾಗುವುದು. 50 ವರ್ಷದೊಳಗಿನ ಸೋಂಕಿತರಿಗೆ ಷರತ್ತಿನ ಮೇರೆಗೆ ಅನುಮತಿ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷನ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ