ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತ ಕೋರಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ

ಸೋಮವಾರ, 22 ಮೇ 2023 (14:40 IST)
ಪೋರ್ಟ್ ಮೊರೆಸ್ಬೈ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಪುವಾ ನ್ಯೂ ಗಿನಿಯಾ ಸರ್ಕಾರ ಶಿಷ್ಟಾಚಾರಕ್ಕೆ ಗುಡ್ಬೈ ಹೇಳಿ ಅಪರೂಪದ ಗೌರವ ಸಲ್ಲಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೋದಿ ವಿಮಾನದಿಂದ ಇಳಿದು ಬರುತ್ತಿದ್ದಂತೆ ಪಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಪೇ ಸ್ವಾಗತಿಸಿದರು. ಸಂಪ್ರದಾಯ ಮುರಿದು ಸೂರ್ಯಾಸ್ತದ ವೇಳೆ ಸ್ವಾಗತಿಸಿದ ಬಳಿಕ ಅವರು ಮೋದಿ ಅವರ ಕಾಲಿಗೆ ನಮಸ್ಕರಿಸಿದರು. ಈ ವೇಳೆ ಮೋದಿ ಅವರನ್ನು ಮೇಲೆತ್ತಿ ಬೆನ್ನು ತಟ್ಟಿದರು.

ಭಾನುವಾರ ರಾಜಧಾನಿ ಫೋರ್ಟ್ ಮೊರೆಸ್ಬೈಗೆ ಮೋದಿ ಬಂದಿಳಿದಾಗ ಸೂರ್ಯಾಸ್ತವಾಗಿತ್ತು. ಪಪುವಾ ನ್ಯೂ ಗಿನಿಯಾ ಸರ್ಕಾರ ಸಾಮಾನ್ಯವಾಗಿ ಯಾವುದೇ ವಿದೇಶಿ ಗಣ್ಯರಿಗೆ ಸೂರ್ಯಾಸ್ತದ ಬಳಿಕ ಸಾಂಪ್ರದಾಯಿಕ ಸ್ವಾಗತ ನೀಡುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ