ನಾಲ್ಕೇ ತಿಂಗಳಲ್ಲಿ ಪತಿಗೆ ಕೈಕೊಟ್ಟು ಪರಾರಿಯಾದ ಪತ್ನಿ

ಶುಕ್ರವಾರ, 17 ನವೆಂಬರ್ 2023 (10:49 IST)
ಆರೋಪಿ ಮಹಿಳೆಯನ್ನು ಖೈರುನ್ನಿಸಾ ಎಂದು ಗುರುತಿಸಲಾಗಿದ್ದು ಆಕೆಯಿಂದ ಮೋಸ ಹೋದ ಪತಿ ಉದ್ಯಮಿ ಎಂದು ಗುರುತಿಸಲಾಗಿದೆ.  ಫೇಸ್‌ಬುಕ್‌ನಲ್ಲಿ ಇವರಿಬ್ಬರಿಗೆ ಪರಿಚಯವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ಎರಡು ಕುಟುಂಬಗಳ ಒಪ್ಪಿಗೆ ಪಡೆದು ಜೋಡಿ ಮದುವೆಯಾಗಿತ್ತು. ಇದೀಗ ಪತಿಗೆ ಕೈಕೊಟ್ಟು ಪತ್ನಿ ಪರಾರಿಯಾದ ಘಟನೆ ವರದಿಯಾಗಿದೆ.
 
ಮೋಜು-ಮಸ್ತಿ ಮಾಡಲು ಬೆಂಗಳೂರಿಗನನ್ನು ಮದುವೆಯಾದ ದುಬೈ ಮೂಲದ ಯುವತಿ ನಾಲ್ಕೇ ತಿಂಗಳಲ್ಲಿ ಮರಳಿ ತನ್ನ ದೇಶಕ್ಕೆ ಪರಾರಿಯಾದ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. 
 
ಪ್ರೀತಿಸಿದವಳನ್ನೇ ಕೈ ಹಿಡಿದ ಖುಷಿಯಲ್ಲಿ ಪತಿಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿತು. ಆದರೆ ಮದುವೆಯಾದ ನಾಲ್ಕೇ ತಿಂಗಳಲ್ಲಿ ಆಕೆ ಗಂಡನನ್ನು ತೊರೆದು ಪರಾರಿಯಾಗಿದ್ದಾಳೆ. 
 
ಮತ್ತೀಗ ವಿಚ್ಛೇದನ ಪಡೆಯದ ಆಕೆ ಮರು ಮದುವೆಯಾಗಿದ್ದಾಳೆ ಎಂಬ ಸುದ್ದಿ ಪತಿಗೆ ತಲುಪಿದೆ. ಆದರೆ ಆಕೆಯನ್ನು ಮರೆಯಲಾಗದೆ ಒದ್ದಾಡುತ್ತಿರುವ ಆತ ಆಕೆ ಎಷ್ಟು ಮದುವೆಯಾದರೂ ಸರಿ ಆಕೆಯೇ ನನಗೆ ಬೇಕು. ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಾತ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ