ಗಡಿಯಲ್ಲಿ ಟರ್ಕಿಯ ವೈಮಾನಿಕ ದಾಳಿ !

ಬುಧವಾರ, 17 ಆಗಸ್ಟ್ 2022 (10:37 IST)
ಡಮಾಸ್ಕಸ್ : ಸಿರಿಯಾ ಗಡಿ ಪೋಸ್ಟ್ಗಳ ಮೇಲೆ ಟರ್ಕಿಯ ಆಡಳಿತ ಪಡೆಗಳು ವೈಮಾನಿಕ ದಾಳಿಕ ನಡೆಸಿರುವ ಪರಿಣಾಮ 17 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
 
ಸಿರಿಯಾ ಗಡಿ ಬಳಿಯ ಹಲವಾರು ಆಡಳಿತದ ಹೊರಠಾಣೆಗಳ ಮೇಲೆ ಟರ್ಕಿಯ ವೈಮಾನಿಕ ದಾಳಿ ನಡೆದಿದ್ದು, ಘಟನೆಯಲ್ಲಿ 17 ಯೋಧರು ಮೃತಪಟ್ಟಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. 

ಬಲಿಪಶುಗಳು ಸಿರಿಯಾ ಅಥವಾ ಕುರ್ದಿಶ್ ಪಡೆಗಳೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಟರ್ಕಿಯ ದಾಳಿಯಲ್ಲಿ ಮೂವರು ಸಿರಿಯಾದ ಸೈನಿಕರು ಮೃತಪಟ್ಟಿದ್ದಾರೆ ಹಾಗೂ 6 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಟರ್ಕಿಯ ಪಡೆಗಳು ಹಾಗೂ ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್(ಎಸ್ಡಿಎಫ್) ನಡುವೆ ಕುರ್ದಿಶ್ ಹಿಡಿತದಲ್ಲಿರುವ ಕೊಬಾನ್ ಪಟ್ಟಣದಲ್ಲಿ ಘರ್ಷಣೆ ನಡೆದಿದೆ. ಕುರ್ದಿಷ್ ಪಡೆಗಳು ರಾತ್ರಿಯಿಡೀ ಟರ್ಕಿಯ ಪ್ರದೇಶದೊಳಗೆ ದಾಳಿ ಮಾಡಿ, ಒಬ್ಬ ಸೈನಿಕನನ್ನು ಕೊಂದಿದ್ದಾರೆ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ