ವಿಶ್ವದ ದೈತ್ಯ ವಿಮಾನ ಮರು ನಿರ್ಮಾಣಕ್ಕೆ ಉಕ್ರೇನ್ ಚಿಂತನೆ

ಗುರುವಾರ, 10 ನವೆಂಬರ್ 2022 (11:48 IST)
ಕೀವ್ : ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಷ್ಯಾಪಡೆಗಳಿಂದ ನಾಶವಾದ ವಿಶ್ವದ ಅತಿದೊಡ್ಡ ವಿಮಾನವನ್ನು ಮರುನಿರ್ಮಾಣ ಮಾಡಲು ಉಕ್ರೇನ್ ಚಿಂತನೆ ನಡೆಸಿದೆ.

ಉಕ್ರೇನ್ ಭಾಷೆಯಲ್ಲಿ `ಮ್ರಿಯಾ ಡ್ರೀಮ್’ ಎಂದು ಕರೆಯಲ್ಪಡುವ 2ನೇ ಆಂಟೊನೊವ್ ಆನ್ -225 ಕಾರ್ಗೊ ವಿಮಾನದ ವಿನ್ಯಾಸ ಕಾರ್ಯವೂ ಆರಂಭವಾಗಿದೆ.

ಈ ಕುರಿತು ಆಂಟೊನೊವ್ ಕಂ ತನ್ನ ಫೇಸ್ಬುಕ್ ಪುಟದಲ್ಲಿ ತಿಳಿಸಿದೆ. ರಷ್ಯಾದೊಂದಿಗಿನ ಯುದ್ಧವು ಕೊನೆಗೊಂಡ ನಂತರ ಇದರ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ