ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ತ್ಯಜಿಸಿದ ದ್ರಾವಿಡ್, ರೋಹಿತ್, ಕೊಹ್ಲಿ! ಕಾರಣ ಬಯಲು

ಬುಧವಾರ, 9 ನವೆಂಬರ್ 2022 (08:30 IST)
ಅಡಿಲೇಡ್: ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾ ತನ್ನ ಯಾವುದೇ ಆಟಗಾರನಿಗೆ ಗಾಯ, ಮತ್ತಿತರ ಸಮಸ್ಯೆಗಳಾಗದಂತೆ ಅತೀವ ಎಚ್ಚರಿಕೆ ವಹಿಸಿದೆ.

ಸಾಮಾನ್ಯವಾಗಿ ಟೀಂ ಇಂಡಿಯಾ ನಾಯಕ, ಕೋಚ್, ದಿಗ್ಗಜ ಕ್ರಿಕೆಟಿಗರಿಗೆ ವಿಮಾನ ಪ್ರಯಾಣ ವೇಳೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಸಿಗುತ್ತದೆ. ಅಂತಹ ಆಸನಗಳಲ್ಲಿ ಕಾಲು ಚಾಚಿ ಆರಾಮವಾಗಿ ಕುಳಿತು ಪ್ರಯಾಣಿಸಬಹುದು. ಈ ಸೌಲಭ್ಯ ಟೀಂ ಇಂಡಿಯಾ ಕೋಚ್ ದ್ರಾವಿಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗಿದೆ.

ಆದರೆ ಇದೀಗ ವಿಶ್ವಕಪ್ ವೇಳೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಿಮಾನ ಪ್ರಯಾಣ ಮಾಡುವಾಗ ದ್ರಾವಿಡ್, ರೋಹಿತ್, ಕೊಹ್ಲಿ ತಮಗೆ ಮೀಸಲಿರುವ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ನ್ನು ವೇಗಿಗಳಿಗೆ ಬಿಟ್ಟುಕೊಟ್ಟಿದ್ದಾರಂತೆ. ಅದಕ್ಕೆ ಕಾರಣ ವೇಗಿಗಳು ಮೈದಾನದಲ್ಲಿ ಹೆಚ್ಚು ಓಡಬೇಕಾಗುತ್ತದೆ. ಅವರ ಕಾಲಿಗೆ ಪ್ರಯಾಣದ ವೇಳೆಯೂ ವಿಶ್ರಾಂತಿ ಸಿಗುವಂತೆ ಮಾಡಬೇಕು. ಅವರಿಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಟೀಂ ಇಂಡಿಯಾ ದಿಗ್ಗಜರು ತಮ್ಮ ಟಿಕೆಟ್ ನ್ನು ವೇಗಿಗಳಾದ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅರ್ಷ್ ದೀಪ್ ಸಿಂಗ್ ಮುಂತಾದವರಿಗೆ ಬಿಟ್ಟುಕೊಟ್ಟಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ