ಆಪ್ತ ವಲಯದವರಿಂದಲೇ ಪುಟಿನ್ ಹತ್ಯೆ : ಝೆಲೆನ್ಸ್ಕಿ

ಗುರುವಾರ, 2 ಮಾರ್ಚ್ 2023 (11:18 IST)
ಕೀವ್ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದು ದಿನ ತಮ್ಮ ಆಪ್ತ ವಲಯದವರಿಂದಲೇ ಕೊಲ್ಲಲ್ಪಡುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭವಿಷ್ಯ ನುಡಿದಿದ್ದಾರೆ.
 
ಝೆಲೆನ್ಸ್ಕಿ ಅವರ ಈ ಹೇಳಿಕೆ ಉಕ್ರೇನ್ನ ‘ಇಯರ್’ ಹೆಸರಿನ ಸಾಕ್ಷ್ಯಚಿತ್ರದಲ್ಲಿ ಕಂಡುಬಂದಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 1 ವರ್ಷವಾಗಿರುವ ಹಿನ್ನೆಲೆ ಶುಕ್ರವಾರ ಇಯರ್ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ರಷ್ಯಾ ಅಧ್ಯಕ್ಷ ನಾಯಕತ್ವದಲ್ಲಿ ದುರ್ಬಲತೆಯ ಅವಧಿ ಬರಲಿದೆ. ಅವರ ಆಪ್ತ ವಲಯದವರೇ ಅಧ್ಯಕ್ಷನ ವಿರುದ್ಧ ಕೆಲಸ ಮಾಡಲು ಪ್ರೇರೇಪಿಸಲಿದೆ. ಪರಭಕ್ಷಕಗಳು ಪರಭಕ್ಷಕನನ್ನು ತಿನ್ನುತ್ತವೆ.

ಕೊಲೆಗಾರನನ್ನು ಕೊಲ್ಲಲು ಅವರು ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಇದು ಖಂಡಿತಾ ನಡೆಯುತ್ತದೆ, ಆದರೆ ಯಾವಾಗ ಆಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ