ಯುಎಸ್ ಪೋಲೋ ಅಸೋಸಿಯೇಶನ್ನಿಂದ ಬೆಂಗಳೂರಿನಲ್ಲಿ ಸ್ಟೋರ್ ಆರಂಭ

Krishnaveni K

ಸೋಮವಾರ, 12 ಫೆಬ್ರವರಿ 2024 (13:25 IST)
·       ಅಂತಾರಾಷ್ಟ್ರೀಯ ಕ್ರೀಡಾ ಪವರ್ ಬ್ರ್ಯಾಂಡ್ ಯು ಎಸ್ ಪೋಲೋ ಅಸೋಸಿಯೇಶನ್ ಬೆಂಗಳೂರಿನ ಜಯನಗರದಲ್ಲಿ ಅತಿದೊಡ್ಡ ಸ್ಟೋರ್ ಅನ್ನು ತೆರೆದಿದೆ
·       ಭಾರತದಲ್ಲಿನ ಅತಿದೊಡ್ಡ ಯುಎಸ್ ಪೋಲೋ ಅಸೋಸಿಯೇಶನ್ ಸ್ಟೋರ್ ಇದಾಗಿದ್ದುಮಹಿಳೆಯರ ಉಡುಪಿನ ಕಲೆಕ್ಷನ್ ಅನ್ನು ಆಫ್ಲೈನ್ನಲ್ಲಿ ಒದಗಿಸುವ ಮೊದಲ ಸ್ಟೋರ್ ಕೂಡಾ ಇದಾಗಿದೆ
ಬೆಂಗಳೂರು ಫೆಬ್ರವರಿ 2024: ಯುಎಸ್ ಪೋಲೋ ಅಸೋಸಿಯೇಶನ್‌ ಭಾರತದ ಪ್ರಮುಖ ಕ್ಯಾಶುವಲ್ ಉಡುಪಿನ ಬ್ರ್ಯಾಂಡ್ ಆಗಿದ್ದು, ಜಾಗತಿಕವಾಗಿ ಯುನೈಟೆಡ್‌ ಸ್ಟೇಟ್ಸ್‌ ಪೊಲೋ ಅಸೋಸಿಯೇಶನ್ (ಯುಎಸ್‌ಪಿಎ) ಎಂದು ಹೆಸರಾಗಿದೆ ಮತ್ತು ಬೆಂಗಳೂರಿನ ಜಯನಗರದಲ್ಲಿ ಹೊಸ ಬ್ರ್ಯಾಂಡ್ ಸ್ಟೋರ್ ಅನ್ನು ಅನಾವರಣಗೊಳಿಸಿದೆ. 6190 ಚದರಡಿ ಚಿಲ್ಲರೆ ಸ್ಥಳವನ್ನು ಆವರಿಸಿರುವ, ಭಾರತದ ಪ್ರಮುಖ ವಸತಿ ಕೇಂದ್ರಗಳಲ್ಲಿ ಒಂದಾಗಿರುವ ಮತ್ತು ಶ್ರೀಮಂತ ವಸತಿ ಮತ್ತು ವಾಣಿಜ್ಯ ಪ್ರದೇಶವಾಗಿರುವ ಜಯನಗರದಲ್ಲಿನ ಬ್ರ್ಯಾಂಡ್ ಸ್ಟೋರ್ 3 ಸ್ಟೋರ್‌ಗಳಲ್ಲಿದೆ ಮತ್ತು ಭಾರತದಲ್ಲಿ ಯುಎಸ್ ಪೋಲೋ ಅಸೋಸಿಯೇಶನ್‌ನ ಚಿಲ್ಲರೆ ಸ್ಥಳಕ್ಕೆ ಹೊಸ ರೂಪ ನೀಡುವ ಗುರಿಯನ್ನು ಹೊಂದಿದೆ. ಅಲ್ಲದೆ, ಡೈನಾಮಿಕ್ ಆದ ಮತ್ತು ಆಕರ್ಷಕವಾದ ಬ್ರ್ಯಾಂಡ್ ಕಥೆಯ ಭಾಗವಾಗುವುದಕ್ಕೆ ಗ್ರಾಹಕರನ್ನು ಆಹ್ವಾನಿಸುತ್ತಿದೆ.
ಪೋಲೋ ಕ್ರೀಡೆಗೆ ನೇರ ಸಂಬಂಧವನ್ನು ಹೊಂದಿರುವ ಬ್ರ್ಯಾಂಡ್‌ನ ಹೊಸ ರಿಟೇಲ್‌ ಸ್ಥಳವು ಆಧುನಿಕ ಅಲಂಕಾರವನ್ನು ಒಳಗೊಂಡಿದೆ ಮತ್ತು ಕ್ರೀಡಾ ಪ್ರೇರಿತ ಅಕ್ಸೆಸರಿಗಳನ್ನೂ ಒಳಗೊಂಡಿದೆ. ಇದು ಶಾಪಿಂಗ್ ಅನುಭವದಾದ್ಯಂತ ಬ್ರ್ಯಾಂಡ್‌ನ ಕಥೆಯನ್ನೂ ಖರೀದಿದಾರರಿಗೆ ಇದು ತಿಳಿಸುತ್ತದೆ. ಪ್ರಾಮಾಣಿಕ, ಆಧುನಿಕ ಮತ್ತು ಕ್ರೀಡಾ ಅಂಶಗಳನ್ನು ಸ್ಟೋರ್ ಒತ್ತಿ ಹೇಳುತ್ತದೆ ಮತ್ತು ಫ್ಯಾಷನ್ ಮತ್ತು ಸ್ಟೈಲ್‌ನ ಅಂಶಗಳನ್ನೂ ಇದು ಪ್ರದರ್ಶಿಸುತ್ತದೆ. ಈ ಮೂಲಕ ಉತ್ಪನ್ನಕ್ಕೆ ಪ್ರಮುಖ ಆದ್ಯತೆಯು ಈ ಸ್ಟೋರ್‌ನಲ್ಲಿ ಸಿಗುತ್ತದೆ. ಸ್ಟೋರ್‌ನಲ್ಲಿ ವಿಶೇಷ ಗೋಡೆ ಇದ್ದು, ಪೋಲೋ ಕ್ಲಾಸಿಕ್ ಮತ್ತು ಕೂಲ್‌ ಎಂಬ ಸ್ಫೂರ್ತಿಯನ್ನು ಇದು ಇದು ಪ್ರತಿಬಿಂಬಿಸುತ್ತದೆ. ಬ್ರ್ಯಾಂಡ್‌ನ ಪ್ರಗತಿಯ ಕಾರ್ಯತಂತ್ರದ ಭಾಗವಾಗಿ ಹೊಸ ಸ್ಟೋರ್ ಇದೆ. ಇದು ಸಣ್ಣ ಸ್ಟೋರ್‌ಗಳು, ಓಮ್ನಿ ಚಾನೆಲ್ ಮತ್ತು ಇಕಾಮರ್ಸ್‌ ಸ್ಟೋರ್‌ ಮೇಲೆಯೂ ಗಮನ ಕೇಂದ್ರೀಕರಿಸುತ್ತದೆ. ಅಲ್ಲದೆ, ಕಥೆ ಹೇಳುವ ಮೂಲಕ ಒಟ್ಟಾರೆ ಬ್ರ್ಯಾಂಡ್ ಮಾರ್ಕೆಟಿಂಗ್ ಅನ್ನೂ ಮಾಡುತ್ತದೆ.
ಜಯನಗರದಲ್ಲಿನ ಈ ಯು.ಎಸ್ ಪೋಲೋ ಅಸೋಸಿಯೇಶನ್ ಸ್ಟೋರ್‌ ವಿಶೇಷ ಮೈಲಿಗಲ್ಲನ್ನು ಸೃಷ್ಟಿಸುತ್ತದೆ. ಹೊಸ ಎಸ್‌ಎಸ್‌24 ವಿಮೆನ್ಸ್‌ವೇರ್ ಕಲೆಕ್ಷನ್ ಅನ್ನು ಸ್ಟೋರ್‌ನಲ್ಲಿ ತಂದಿರುವ ಭಾರತದ ಮೊದಲ ಸ್ಟೋರ್ ಕೂಡಾ ಇದಾಗಿದೆ. ಈ ಹಿಂದೆ ಇದು ಎಕ್ಸ್‌ಕ್ಲೂಸಿವ್ ಆಗಿ ಆನ್‌ಲೈನ್‌ನಲ್ಲಿ ಲಭ್ಯವಿತ್ತು. ಬ್ರ್ಯಾಂಡ್ ಒದಗಿಸುವ ಇಡೀ ಉತ್ಪನ್ನ ವಿಭಾಗಗಳ ಶ್ರೇಣಿಯನ್ನು ಸ್ಟೋರ್ ಒಳಗೊಂಡಿದೆ. ಇದರಲ್ಲಿ ಯುಎಸ್‌ಪಿಎ ಮೇನ್‌ಲೈನ್, ಯುಎಸ್‌ಪಿಎ ಸ್ಪೋರ್ಟ್‌, ಡೆನಿಮ್ & ಕೋ, ವಿಮೆನ್ಸ್‌ವೇರ್, ಪಾದರಕ್ಷೆ, ಮಕ್ಕಳ ಉಡುಪುಗಳು, ಅಕ್ಸೆಸರಿಗಳು ಮತ್ತು ಒಳಉಡುಪುಗಳು ಇವೆ. ಪೋಲೋ ಶರ್ಟ್‌ಗಳು, ಡೆನಿಮ್‌ಗಳು, ಸ್ವೆಟರ್‌ಗಳು, ಜಾಕೆಟ್‌ಗಳು ಮತ್ತು ಟಿಶರ್ಟ್‌ಗಳು ಕೆಲವು ಕಾಲಾತೀತ ಮೆಚ್ಚಿನ ಉಡುಪುಗಳಾಗಿದ್ದು, ಇವುಗಳನ್ನೂ ಇದರಲ್ಲಿನ ಕಲೆಕ್ಷನ್‌ನಲ್ಲಿ ಸೇರಿಸಲಾಗಿದೆ.
ಬಿಡುಗಡೆಯ ಬಗ್ಗೆ ಮಾತನಾಡಿ ಯುಎಸ್ ಪೋಲೋ ಅಸೋಸಿಯೇಶನ್‌ ಭಾರತದ ಸಿಇಒ ಅಮಿತಾಭ್ ಸೂರಿ “ಜಯನಗರದಲ್ಲಿ ನಮ್ಮ ಫ್ಲಾಗ್‌ಶಿಪ್ ಸ್ಟೋರ್ ಆಗಿರುವ ಇದು ಒಂದು ಸಾಮಾನ್ಯ ಸ್ಟೋರ್‌ನ ವಿಸ್ತರಣೆಯಲ್ಲ. ಬದಲಿಗೆ, ಬೆಂಗಳೂರಿನ ಗ್ರಾಹಕರಿಗೆ ಸ್ಟೇಟ್‌ಮೆಂಟ್ ಮತ್ತು ವಿಶಿಷ್ಟ ಅನುಭವವಾಗಿದೆ. ಯುಎಸ್ ಪೋಲೋ ಅಸೋಸಿಯೇಶನ್‌ನ ಪರಿಣಿತಿಯನ್ನು ಪ್ರದರ್ಶಿಸುತ್ತದೆ. ಇದು ಕ್ರೀಡೆಯಷ್ಟೇ ದಂತಕಥೆಯನ್ನು ಹೊಂದಿರುವ ಬ್ರ್ಯಾಂಡ್ ಆಗಿದ್ದು, ಭಾರತೀಯ ಅಭಿಮಾನಿಗಳಿಗೆ ಹೊಂದಿರುವ ಬದ್ಧತೆಯನ್ನೂ ಇದು ಪ್ರದರ್ಶಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಯುಎಸ್‌ಪಿಎ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ ಮತ್ತು ಅತಿದೊಡ್ಡ ಫ್ಲಾಗ್‌ಶಿಪ್ ಸ್ಟೋರ್ ಅನ್ನು ತೆರೆಯುವುದಕ್ಕೆ ಪರಿಪೂರ್ಣವಾದ ಆಯ್ಕೆಯಾಗಿದೆ. ದೇಶದಲ್ಲಿ ಅತಿದೊಡ್ಡ ವಸತಿ ಮತ್ತು ವಾಣಿಜ್ಯ ಕೇಂದ್ರವಾಗಿ ಜಯನಗರ ಹೊರಹೊಮ್ಮಿದೆ. ಭಾರತೀಯ ಗ್ರಾಹಕರ ಬದಲಾಗುತ್ತಿರುವ ಫ್ಯಾಷನ್ ಆದ್ಯತೆಗಳನ್ನು ಪೂರೈಸಲು ನಾವು ಶ್ರಮಿಸುತ್ತಿದ್ದೇವೆ” ಎಂದಿದ್ದಾರೆ. ಸದ್ಯ, ಭಾರತದಲ್ಲಿ ಬ್ರ್ಯಾಂಡ್‌ನ ರಿಟೇಲ್‌ ಫೂಟ್‌ಪ್ರಿಂಟ್‌ನಲ್ಲಿ 400 ಕ್ಕೂ ಹೆಚ್ಚು ಬ್ರ್ಯಾಂಡ್ ಸ್ಟೋರ್‌ಗಳಿವೆ ಮತ್ತು ದೇಶಾದ್ಯಂತ 200 ಕ್ಕೂ ಹೆಚ್ಚು ನಗರಗಳಲ್ಲಿ 2000 ಕ್ಕೂ ಹೆಚ್ಚು ಶಾಪ್ ಇನ್ ಶಾಪ್‌ಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ