ಫೆಬ್ರವರಿ 9 ನೇ ದಿನದ ವಿಶೇಷತೆ ಏನು ಗೊತ್ತಾ?

Krishnaveni K

ಶುಕ್ರವಾರ, 9 ಫೆಬ್ರವರಿ 2024 (09:15 IST)
Photo Courtesy: Twitter
ಬೆಂಗಳೂರು; ವ್ಯಾಲೆಂಟೈನ್ ವೀಕ್ ನಲ್ಲಿ ಫೆಬ್ರವರಿ 9 ಎಂದರೆ ಮತ್ತೊಂದು ವಿಶೇಷ ದಿನ. ನಿನ್ನೆ ಪ್ರಪೋಸ್ ಡೇ ಆಗಿದ್ದರೆ ಇಂದಿನ ದಿನವನ್ನು ಚಾಕಲೇಟ್ ಡೇ ಎಂದು ಆಚರಿಸಲಾಗುತ್ತದೆ.

ಪ್ರೀತಿ ಪಾತ್ರರಿಗೆ ಮನದ ಮಾತು ಹೇಳಿ ಪ್ರಪೋಸ್ ಮಾಡಿದ ಮೇಲೆ ಬಾಯಿ ಸಿಹಿ ಮಾಡಿಕೊಳ್ಳಲೇಬೇಕಲ್ಲವೇ? ಅದಕ್ಕಾಗಿ ಇಂದು ಚಾಕಲೇಟ್ ದಿನ ಆಚರಿಸಲಾಗುತ್ತದೆ. ನಿಮ್ಮ ಪ್ರೀತಿ ಪಾತ್ರರಿಗೆ ಆಕೆ/ಆತ ಇಷ್ಟಪಡುವ ಚಾಕಲೇಟ್ ತಿನಿಸಿ ನಿಮ್ಮ ಪ್ರೀತಿ ಸಂಬಂಧವನ್ನು ಇನ್ನಷ್ಟು ಚೆನ್ನಾಗಿ ಮಾಡಿ.

ಚಾಕಲೇಟ್ ದಿನದ ವಿಶೇಷ
ಸಾಮಾನ್ಯವಾಗಿ ಚಾಕಲೇಟ್ ದಿನವನ್ನಾಗಿ ಜುಲೈ 7 ರಂದು ಆಚರಿಸಲಾಗುತ್ತದೆ. ಆದರೆ ಇಂದು ಆಚರಿಸುವ ಚಾಕಲೇಟ್ ದಿನ ಪ್ರೀತಿಗೆ ಸಂಬಂಧಪಟ್ಟಿದ್ದು. ನೀವು ಪ್ರೀತಿಸುವ ವ್ಯಕ್ತಿಯನ್ನು ಖುಷಿಪಡಿಸಲು ಒಂದು ಬುಟ್ಟಿ ಚಾಕಲೇಟ್ ಕೊಟ್ಟು ಪ್ರಪೋಸ್ ಮಾಡಲೂ ಬಹುದು. ಇಲ್ಲವೇ ಆಕೆಯ/ಆತನ ಜೊತೆ ಕೂತು ರೊಮ್ಯಾಂಟಿಕ್ ಆಗಿ ಚಾಕಲೇಟ್ ಸವಿಯಬಹುದು. ಸಾಮಾನ್ಯವಾಗಿ ಚಾಕಲೇಟ್ ಇಷ್ಟಪಡದೇ ಇರುವವರು ಯಾರೂ ಇಲ್ಲ. ಹೀಗಾಗಿ ನಿಮ್ಮ ಸಂಗಾತಿಗೆ ಚಾಕಲೇಟ್ ನಿಂದಲೇ ಸರ್ಪೈಸ್ ನೀಡಬಹುದು.

ಚಾಕಲೇಟ್ ಎಂದರೆ ಇಬ್ಬರ ನಡುವಿನ ಸಂಬಂಧದ ಬದ್ಥತೆ ಮತ್ತು ಪ್ರೀತಿಯ ಸಂಕೇತವಾಗಿದೆ.  ಹೀಗಾಗಿ ವಾಲೆಂಟೈನ್ ವೀಕ್ ನಲ್ಲಿ ಪ್ರೇಮಿಗಳು ಪರಸ್ಪರ ಚಾಕಲೇಟ್ ನೀಡಿ ತಮ್ಮ ಪ್ರೀತಿ ಸಂಬಂಧವನ್ನು ಗಟ್ಟಿಗೊಳಿಸುತ್ತಾರೆ. ವಾಲೆಂಟೈನ್ ದಿನ ಹೆಚ್ಚು ಚಾಲ್ತಿಗೆ ಬಂದಿದ್ದು 1840 ರ ಕಾಲಘಟ್ಟದಲ್ಲಿ. ಅಂದಿನಿಂದಲೇ ಪ್ರೇಮಿಗಳು ಚಾಕಲೇಟ್ ನೀಡಿ ಪರಸ್ಪರ ಶುಭಾಶಯ ಕೋರುವ ಪರಂಪರೆಯಿದೆ. ಹೀಗಾಗಿ ಅದೇ ಪರಂಪರೆ ಈಗಲೂ ಮುಂದುವರಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ