ಟೆಡ್ಡಿ ಡೇ ಯಾಕೆ ಆಚರಿಸುತ್ತಾರೆ ಗೊತ್ತಾ? ಈ ಹೆಸರು ಬಂದಿದ್ದು ಹೇಗೆ?

Krishnaveni K

ಶನಿವಾರ, 10 ಫೆಬ್ರವರಿ 2024 (10:19 IST)
ಬೆಂಗಳೂರು: ವಾಲೆಂಟೈನ್ ವೀಕ್ ನಲ್ಲಿ ಇಂದು ಟೆಡ್ಡಿ ಡೇ ಎಂದು ಆಚರಿಸಲಾಗುತ್ತದೆ. ಹಾಗಿದ್ದರೆ ಟೆಡ್ಡಿ ಡೇ ಎಂದರೇನು ಯಾಕೆ ಆಚರಿಸುತ್ತಾರೆ ಇಲ್ಲಿ ನೋಡಿ.

ಪ್ರತೀ ವರ್ಷ ಫೆಬ್ರವರಿ 10 ರಂದು ಟೆಡ್ಡಿ ಡೇ ಆಚರಿಸಲಾಗುತ್ತದೆ. ಟೆಡ್ಡಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಮೃದುವಾದ ಮುದ್ದಾದ ಗೊಂಬೆಗಳನ್ನು ಮಕ್ಕಳು ಮಾತ್ರವಲ್ಲ, ದೊಡ್ಡವರೂ ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಹುಡುಗಿಯರಿಗೆ ಟೆಡ್ಡಿ ಮೇಲೆ ವಿಶೇಷ ಪ್ರೀತಿಯಿರುತ್ತದೆ.

ಟೆಡ್ಡಿ ಹೆಸರು ಬಂದಿದ್ದು ಹೇಗೆ?
ಟೆಡ್ಡಿ ಎಂಬ ಹೆಸರು ಬಂದಿದ್ದಕ್ಕೆ ಒಂದು ವಿಶಿಷ್ಟ ಹಿನ್ನಲೆಯಿದೆ. ಅಮೆರಿಕಾದ 26 ನೇ ಅಧ್ಯಕ್ಷ ಟೆಡ್ಡಿ ರೂಸ್ ವೆಲ್ಟ್  ಅವರಿಂದಾಗಿ ಈ ಹೆಸರು ಬಂತು ಎನ್ನಲಾಗುತ್ತದೆ. ಈ ದಿನ ಎಲ್ಲರೂ ತಮ್ಮ ಪ್ರೀತಿ ಪಾತ್ರರಿಗೆ ಟೆಡ್ಡಿ ನೀಡಿ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಟೆಡ್ಡಿಯ ಹಾಗೆಯೇ ಪ್ರೀತಿ ಪಾತ್ರರ ಜೀವನವೂ ಮೃದುವಾಗಿ, ಹಸನಾಗಿರಲಿ ಎಂದು ಹಾರೈಸುವುದೇ ಇದರ ಉದ್ದೇಶ.

ಆಚರಿಸುವುದು ಹೇಗೆ?
ಟೆಡ್ಡಿ ಡೇಯಂದು ನಿಮ್ಮ ಪ್ರೀತಿ ಪಾತ್ರರಿಗೆ ಅವರ ಟೇಸ್ಟ್ ಗೆ ಹೊಂದುವಂತಹ ಟೆಡ್ಡಿ ಜೊತೆಗೆ ಒಂದು ಸುಂದರವಾದ ಪ್ರೀತಿಯ ಸಾಲುಗಳನ್ನು ಬರೆದು ಉಡುಗೊರೆಯಾಗಿ ನೀಡಬಹುದು. ಇದು ಒಂದು ರೀತಿಯಲ್ಲಿ ಆಟಿಕೆ ಇರಬಹುದು. ಆದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಉಡುಗೊರೆಯಾಗಿ ನೀಡಬಹುದಾದಂತಹ ಸಾಧನವಾಗಿದೆ. ಹೀಗಾಗಿಯೇ ಪ್ರೇಮಿಗಳ ಆಯ್ಕೆಯಲ್ಲಿ ಈ ಉಡುಗೊರೆಗೆ ವಿಶೇಷ ಸ್ಥಾನವಿದೆ. ಅಲ್ಲದೆ, ಟೆಡ್ಡಿ ನೋಡಿದರೆ ನಮಗೆ ಮುದ್ದ ಮಾಡಬೇಕು ಎನಿಸುವುದು ಸಹಜ. ಅದೇ ರೀತಿ ಇಬ್ಬರ ನಡುವಿನ ಪ್ರೀತಿಯೂ ಅಷ್ಟೇ ಮುದ್ದಾಗಿರಲಿ ಎಂದು ಸಂದೇಶ ರವಾನಿಸಿದಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ