Video: ತಿಕ ತೊಳೆಯಕ್ಕೂ ನೀರು ಕೊಡಲ್ಲ ಎಂದ ಭಾರತೀಯರ ವಿರುದ್ಧ ಗಂಟಲು ಸೀಳ್ತೀನಿ ಎಂದು ಸನ್ನೆ ಮಾಡಿ ಪಾಕಿಸ್ತಾನ ರಾಯಭಾರಿ

Krishnaveni K

ಶನಿವಾರ, 26 ಏಪ್ರಿಲ್ 2025 (17:16 IST)
ಲಂಡನ್: ಪೆಹಲ್ಗಾಮ್ ನಲ್ಲಿ ಭಾರತೀಯ ಹಿಂದೂಗಳ ಮೇಲೆ ನಡೆದ ಉಗ್ರ ದಾಳಿಯನ್ನು ಖಂಡಿಸಿ ಲಂಡನ್ ನಲ್ಲಿ ಭಾರತೀಯ ನಿವಾಸಿಗಳು ಪಾಕಿಸ್ತಾನ ಹೈಕಮಿಷನ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪಾಕ್ ರಾಯಭಾರಿ ಗಂಟಲು ಸೀಳ್ತೀನಿ ಎಂದು ಸನ್ನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಭಾರತ ಮೂಲದ ಲಂಡನ್ ನಿವಾಸಿಗಳು ಪಾಕಿಸ್ತಾನದ ಹೈಕಮಿಷನ್ ಕಚೇರಿ ಮುಂಭಾಗ ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಹಣೆಗೆ ಕುಂಕುಮವಿಟ್ಟು ಕೈಯಲ್ಲಿ ನಾನು ಹಿಂದೂ ಎಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಇವರಲ್ಲಿ ಕೆಲವರು ಭಾರತ ಸಿಂಧೂ ನದಿ ಒಪ್ಪಂದ ಮುರಿದಿರುವುದನ್ನು ನೆನಪಿಸಲು ಕೈಯಲ್ಲಿ ನೀರಿನ ಬಾಟಲಿ ಹಿಡಿದುಕೊಂಡು ಬಂದಿದ್ದರು.

ನಿಮಗೆ ತಿಕ ತೊಳೆಯಲೂ ನೀರು ಕೊಡಲ್ಲ ಎಂದು ಭಾರತೀಯರು ಅಣಕಿಸಿದ್ದಾರೆ. ಕೆಲವು ಹೊತ್ತಿನ ಬಳಿಕ ಕಚೇರಿಯಿಂದ ಹೊರಬಂದು ಬಾಲ್ಕನಿಯಲ್ಲಿ ನಿಂತ ಪಾಕಿಸ್ತಾನ ರಾಯಭಾರಿ ಕರ್ನಲ್ ತೈಮೂರ್ ರಾಹತ್, ನಿಮ್ಮ ಗಂಟಲು ಸೀಳ್ತೀನಿ ಎಂದು ಸನ್ನೆ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

 

A senior Pakistan Army official added fuel to the fire by making a throat-slitting gesture at hundreds of protesters gathered outside the Pakistan High Commission in London, who were peacefully protesting against the terror attack in Pahalgam.

Read here: https://t.co/wR1Bu8QCUWpic.twitter.com/4ZRmg1tkO7

— IndiaToday (@IndiaToday) April 26, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ