ಅಮೆರಿಕದ ಅಪಾಯಕಾರಿ ಬಾಂಬ್ಗಳಿಗೆ ಸಡ್ಡು ಹೊಡೆಯಲು ರಷ್ಯಾ ಥರ್ಮೋಬಾರಿಕ್ ಬಾಂಬ್ಗಳನ್ನು ತಯಾರಿಸಿದ್ದು,'
ಇವು ಜಗತ್ತಿನಲ್ಲಿಯೇ ಪರಿಣಾಮಕಾರಿ ಎನಿಸಿವೆ. ಪರಮಾಣು ರಹಿತ ಬಾಂಬ್ ಇವಾಗಿದ್ದು, ಸ್ಫೋಟಕ ಅನಿಲ ಹಾಗೂ ರಾಸಾಯನಿಕ ಬಳಸಿ ತಯಾರಿಸಲಾಗುತ್ತದೆ. ಹಾಗಾಗಿ ಇವು ಪರಿಣಾಮಕಾರಿಯಾಗಿದ್ದು, ಏರೋಸಾಲ್ ಅಥವಾ ನಿರ್ವಾತ ಬಾಂಬ್ ಎಂದೂ ಕರೆಯುತ್ತಾರೆ.
ಎಷ್ಟು ಪರಿಣಾಮಕಾರಿ?
ಯಾವುದೇ ಪ್ರದೇಶವನ್ನು ನಿರ್ನಾಮ ಮಾಡುವ ಸಾಮರ್ಥ್ಯ ಹೊಂದಿರುವ ಥರ್ಮೋಬಾರಿಕ್ ಬಾಂಬ್ಗಳು, ದೊಡ್ಡ ದೊಡ್ಡ ಕಟ್ಟಡ, ಕೋಟೆ, ಗುಹೆ, ಕ್ಷಿಪಣಿಗಳನ್ನು ಒಂದೇ ಬಾರಿಗೆ ಹೊಡೆದುರುಳಿಸಿ, ಇಡೀ ಪ್ರದೇಶವನ್ನು ಸ್ಮಶಾನದಂತೆ ಮಾಡಿಹಾಕುವಷ್ಟು ಪರಿಣಾಮಕಾರಿಯಾಗಿವೆ.
ಇವು ರಷ್ಯಾ ಬಳಿ ಹೇರಳವಾಗಿದ್ದು, ಯಾವುದೇ ಕ್ಷಣದಲ್ಲೂ ಉಕ್ರೇನ್ ಮೇಲೆ ಎಸೆಯಬಹುದು ಎನ್ನಲಾಗುತ್ತದೆ. ಥರ್ಮೋಬಾರಿಕ್ ರಾಕೆಟ್ ಉಡಾವಣೆ ಮಾಡುವ ಟಿಒಎಸ್-1 ವಾಹಕಗಳಿಂದ ಬಾಂಬ್ಗಳನ್ನು ಹಾರಿಸಲಾಗುತ್ತದೆ.
ಹೀಗೊಂದು ಭೀಕರ ಕಲ್ಪನೆ
ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗುತ್ತಾನೆ. ಆತನ ದೇಹದ ಎಲ್ಲ ಆಮ್ಲಜನಕವು ಕ್ಷಣಮಾತ್ರದಲ್ಲಿ ಹೊರಗೆ ಬರುತ್ತದೆ. ಆಗ ಮತ್ತೊಮ್ಮೆ ಉಸಿರಾಡುತ್ತಾನೆ.
ನಂತರ, ನೀರು ಆತನ ದೇಹವನ್ನು ಪ್ರವೇಶಿಸುವ ಬದಲು ವಿಷಕಾರಿ ಕಣಗಳು ಒಳಹೊಕ್ಕಾಗ ಆಗುವ ಅನುಭವವನ್ನೇ ಥರ್ಮೋಬಾರಿಕ್ ಬಾಂಬ್ ಸ್ಫೋಟದಿಂದ ಆಗುತ್ತದೆ ಎಂದೇ ವಿಶ್ಲೇಷಿಸಲಾಗಿದೆ. ಇದುವರೆಗೆ ಸಿರಿಯಾ ಮೇಲೆ ಮಾತ್ರ ರಷ್ಯಾ ಈ ಬಾಂಬ್ ಬಳಸಿದೆ ಎಂದು ತಿಳಿದುಬಂದಿದೆ.