ಆಕ್ಸಿಜನ್ ಕೊರತೆ ನೀಗಿಸಲು ನೆರವಿಗೆ ಬಂದ ಟಾಟಾ ಸಂಸ್ಥೆ: ಧನ್ಯವಾದ ಸಲ್ಲಿಸಿದ ಪ್ರಧಾನಿ ಮೋದಿ

ಶುಕ್ರವಾರ, 23 ಏಪ್ರಿಲ್ 2021 (10:37 IST)
ನವದೆಹಲಿ: ಕೊರೋನಾ ರೋಗಿಗಳಿಗೆ ಸಾಕಷ್ಟು ಆಕ್ಸಿಜನ್ ಪೂರೈಕೆ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿರುವ ಆಸ್ಪತ್ರೆಗಳ ನೆರವಿಗೆ ದೇಶದ ಪ್ರತಿಷ್ಠಿತ ಉದ್ಯಮ ಸಂಸ್ಥೆ ಟಾಟಾ ಮುಂದೆ ಬಂದಿದೆ.

 

ಟಾಟಾ ಸಂಸ್ಥೆ ಆಕ್ಸಿಜನ್ ಪೂರೈಕೆಗೆ ಮುಂದಾಗಿದೆ. ಆಮ್ಲಜನಕ ಪೂರೈಕೆಗೆ 24 ಕ್ರಯೋಜೆನಿಕ್ ಕಂಟೈನರ್ ಗಳನ್ನು ಆಮದು ಮಾಡಿಕೊಳ್ಳಲಿದ್ದೇವೆ ಎಂದು ಸಂಸ್ಥೆ ಟ್ವೀಟ್ ಮೂಲಕ ತಿಳಿಸಿದೆ.

ಟಾಟಾ ಸಂಸ್ಥೆಯ ಈ ಹೆಜ್ಜೆಯನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುವಾಗ ಆಕ್ಸಿಜನ್ ಕೊರತೆ ಬಗ್ಗೆ ಹೇಳಿದ ಬೆನ್ನಲ್ಲೇ ಟಾಟಾ ಸಂಸ್ಥೆ ಖುದ್ದಾಗಿ ನೆರವು ನೀಡಲು ಮುಂದಾಗಿದೆ. ಜೊತೆಯಾಗಿ ಕೊರೋನಾ ವಿರುದ್ಧ ಹೋರಾಡಲು ನಾವೂ ಕೈ ಜೋಡಿಸಲಿದ್ದೇವೆ ಎಂದು ಸಂಸ್ಥೆ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ