ಓಸ್ಲೊ : ಪ್ರಪಂಚದಾದ್ಯಂತ ಕೋವಿಡ್ ರೂಪಾಂತರಿ ಓಮಿಕ್ರಾನ್ ಉಲ್ಬಣಗೊಳ್ಳುತ್ತಿದ್ದರೂ ನಾರ್ವೆ ದೇಶದಲ್ಲಿ ಮಾತ್ರ ಕೋವಿಡ್ ಕಟ್ಟು ನಿಟ್ಟಿನ ಮಾರ್ಗಸೂಚಿಗಳನ್ನು ತೆಗೆದು ಹಾಕಿದೆ.
ನಾರ್ವೆ ಸರ್ಕಾರ ಕೋವಿಡ್-19 ತಡೆಗಟ್ಟಲು ವಿಧಿಸಿದ್ದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಹಾಕಿದೆ. ಇದರ ಪ್ರಕಾರ ಅಲ್ಲಿನ ಜನರು ಇನ್ನು ಮುಂದೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ಗಳನ್ನು ಧರಿಸುವ ಅಗತ್ಯ ಇರುವುದಿಲ್ಲ.
ಸಾಮಾಜಿಕ ಅಂತರದ ನಿಯಮವನ್ನು ನಾವು ತೆಗೆದು ಹಾಕುತ್ತಿದ್ದೇವೆ. ಇನ್ನು ಮುಂದೆ ನಾವು ಮೊದಲಿನಂತೆ ಜೀವಿಸಬಹುದು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಾವಿನ್ನು ಬೆರೆಯಬಹುದು.
ಬಸ್ಸು, ರೈಲು ಹಾಗೂ ದೋಣಿಯಲ್ಲಿ ನಿಶ್ಚಿಂತರಾಗಿ ಪ್ರಯಾಣಿಸಬಹುದು ಎಂದು ನಾರ್ವೆ ಪ್ರಧಾನ ಮಂತ್ರಿ ಜೊನಾಸ್ ಗಹರ್ ಸ್ಟೋರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.