ಹೊಸ ವರ್ಷವನ್ನು ಬರಮಾಡಿಕೊಳ್ಳುವ ವಿಶ್ವದ ಮೊದಲ ಎರಡು ಸ್ಥಳಗಳು ಯಾವುವು ಗೊತ್ತಾ?
ಭಾನುವಾರ, 31 ಡಿಸೆಂಬರ್ 2023 (13:40 IST)
ನವದೆಹಲಿ: 2023 ಕ್ಕೆ ಇಂದೇ ಕೊನೆಯ ದಿನ. ನಾಳೆ 2024 ರ ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ.
ಹಾಗಿದ್ದರೆ ಭೂಮಿ ಮೇಲೆ ಮೊದಲು ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸ್ಥಳ ಅಥವಾ ದೇಶ ಯಾವುದು ಎಂದು ನಿಮಗೆ ಗೊತ್ತಾ? ಅಂತಹ ಎರಡು ವಿಶೇಷ ಸ್ಥಳಗಳಿವೆ.
ಪೆಸಿಫಿಕ್ ನ ದ್ವೀಪ ರಾಷ್ಟ್ರಗಳಾದ ಟೋಂಗಾ, ಸಮಾವೊ ಮತ್ತು ಕಿರಿಬಾತಿ ಹೊಸ ವರ್ಷವನ್ನು ಮೊದಲು ಬರಮಾಡಿಕೊಳ್ಳುತ್ತವೆ. ಇಲ್ಲಿ ಭಾರತೀಯ ಕಾಲಮಾನ ಪ್ರಕಾರ 3.30 ಕ್ಕೇ ಸೂರ್ಯೋದಯವಾಗುತ್ತದೆ. ಹೀಗಾಗಿ ಮೊದಲು ಹೊಸ ವರ್ಷವನ್ನು ಬರಮಾಡಿಕೊಳ್ಳುವ ಹೆಗ್ಗಳಿಕೆ ಈ ದ್ವೀಪ ರಾಷ್ಟ್ರಗಳದ್ದು.
ಭಾರತಕ್ಕಿಂತ ಮೊದಲು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮುಂತಾದ ಪೂರ್ವ ರಾಷ್ಟ್ರಗಳಲ್ಲಿ ಮೊದಲು ಬೆಳಗಾಗುತ್ತದೆ. ಇಲ್ಲಿ ನಮಗಿಂತ ಕೆಲವು ಗಂಟೆಗಳ ಮೊದಲೇ ಹೊಸ ವರ್ಷಾಚರಣೆ ಮಾಡಲಾಗುತ್ತದೆ.