16 ನೇ ವಯಸ್ಸಿನಲ್ಲಿಯೇ ಅತ್ಯಾಚಾರಕ್ಕೊಳಗಾದ ಈ ನಟಿ ಯಾರು ಗೊತ್ತಾ?

ಗುರುವಾರ, 27 ಸೆಪ್ಟಂಬರ್ 2018 (08:56 IST)
ಅಮೇರಿಕಾ : ಅಮೆರಿಕಾ ಮಾಡೆಲ್ ಹಾಗೂ ನಟಿ ಪದ್ಮಾ ಲಕ್ಷ್ಮಿ 16 ನೇ ವಯಸ್ಸಿನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿತ್ತು ಎಂಬ ಆಘಾತಕಾರಿ ವಿಷ್ಯವೊಂದನ್ನು ಬಹಿರಂಗಪಡಿಸಿದ್ದಾರೆ.


ನ್ಯೂಯಾರ್ಕ್ ಟೈಮ್ಸ್ ಗೆ ತೆರೆದ ಪತ್ರವೊಂದನ್ನು ಬರೆದ ಪದ್ಮಾಲಕ್ಷ್ಮಿ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಪದ್ಮಾ ಲಕ್ಷ್ಮಿ 16 ನೇ ವಯಸ್ಸಿನಲ್ಲಿರುವಾಗ 23 ವರ್ಷದ ಸುಂದರ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಳಂತೆ. ಇಬ್ಬರ ನಡುವೆ ಡೇಟಿಂಗ್ ಶುರುವಾಗಿ ಒಂದು ತಿಂಗಳಾಗಿತ್ತಂತೆ. ಹೊಸ ವರ್ಷಾಚರಣೆ ಹೆಸರಿನಲ್ಲಿ ಪದ್ಮಾಳನ್ನು ಮನೆಗೆ ಕರೆದಿದ್ದನಂತೆ. ತುಂಬಾ ಸುಸ್ತಾಗಿದ್ದ ಪದ್ಮಾ, ನಿದ್ರೆ ಬಂದು ಅವನ ಮನೆಯಲ್ಲಿಯೇ ಮಲಗಿದ್ದಳಂತೆ.


ಬೆಳಿಗ್ಗೆ ಎಚ್ಚರವಾಗ್ತಿದ್ದಂತೆ ಖಾಸಗಿ ಅಂಗದಲ್ಲಿ ತುಂಬಾ ನೋವು ಕಾಣಿಸಿಕೊಂಡಿತ್ತಂತೆ. ಕಣ್ಣು ತೆರೆದು ನೋಡಿದಾಗ ಆಕೆ ಮೈ ಮೇಲೆ ಬಾಯ್ ಫ್ರೆಂಡ್ ಇದ್ದನಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ