ಸುಪ್ರೀಂ ಕೋರ್ಟ್ ಮೊದಲ ಮಹಿಳಾ ನ್ಯಾಯಾಧೀಶೆ ಯಾರು?

ಸೋಮವಾರ, 24 ಜನವರಿ 2022 (15:59 IST)
ಇಸ್ಲಾಮಾಬಾದ್ : ಪಾಕಿಸ್ತಾನ ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶರಾಗಿ ಆಯೆಷಾ ಮಲಿಕ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕಾನೂನನ್ನು ಮಹಿಳಾ ವಿರೋದ್ಧ ಪ್ರಯೋಜಿಸಲಾಗುತ್ತದೆ ಎಂಬ ಆರೋಪ ಹೊತ್ತಿರುವ ರಾಷ್ಟ್ರದಲ್ಲಿ ಈ ಬೆಳವಣಿಗೆ ನಿಜಕ್ಕೂ ಹೆಗ್ಗುರುತಾಗಿದೆ ಎಂದು ವಿಶ್ಲೇಷಿಸಲಾಗಿದೆ. ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆದ ಸಮಾರಂಭದಲ್ಲಿ ಮಲಿಕ್ ಪಾಲ್ಗೊಂಡು ಪ್ರಮಾಣ ವಚನ ಸ್ವೀಕರಿಸಿದರು.

ಪಾಕಿಸ್ತಾನದ ಅತ್ಯುನ್ನತ ನ್ಯಾಯಾಲಯದಲ್ಲಿ 16 ಪುರುಷ ನ್ಯಾಯಾಧೀಶರ ನಡುವೆ ಒಬ್ಬರೇ ಮಹಿಳಾ ನ್ಯಾಯಾಧೀಶೆಯಾಗಿ ಮಲಿಕ್ ಕಾಣಿಸಿಕೊಂಡಿದ್ದಾರೆ.

ಮಲಿಕ್ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿನ ಎಲ್ಲಾ ಅಡೆತಡೆಗಳನ್ನು ಮುರಿದಿದ್ದಾರೆ. ವ್ಯವಸ್ಥೆಯಲ್ಲಿ ಇತರ ಮಹಿಳೆಯರು ಮುಂದುವರಿಯಲು ಇದು ಅನುವು ಮಾಡಿಕೊಟ್ಟಂತಾಗಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಖದಿಜಾ ಸಿದ್ದಿಕಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ