ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?

ಭಾನುವಾರ, 25 ಜೂನ್ 2023 (09:07 IST)
ವಾಗ್ನರ್ ಸೇನೆ ದಕ್ಷಿಣ ರಷ್ಯಾದ ರೋಸ್ತೋವ್ ನಗರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇಡೀ ನಗರದಲ್ಲಿ ವಾಗ್ನರ್ ಸೇನೆಯ ಯುದ್ಧ ಟ್ಯಾಂಕ್ಗಳು ಸಂಚರಿಸುತ್ತಿವೆ.

ಇದೀಗ ವಾಗ್ನರ್ ಪಡೆ ಮಾಸ್ಕೋ ಕಡೆ ಹೆಜ್ಜೆ ಇಟ್ಟಿದೆ. ಇದನ್ನು ತಡೆಯಲು ರಷ್ಯಾ ಸೇನೆ ಮುಂದಾಗಿದ್ದು, ವಾಗ್ನರ್ ಪಡೆಗಳ ಮೇಲೆ ವಾಯು ದಾಳಿ ನಡೆಸುತ್ತಿದೆ. ಇದಕ್ಕೆ ವಾಗ್ನರ್ ಪಡೆಗಳು ತಿರುಗೇಟು ನೀಡುತ್ತಿವೆ. ರಷ್ಯಾದ ಹಲವು ಸೇನಾ ಕಾಪ್ಟರ್ಗಳು ನಾಶವಾಗಿವೆ.
ವಾಗ್ನರ್ ಪಡೆ ಹತ್ತಿಕ್ಕಲು ರಷ್ಯಾ ಸೇನೆ ತಮ್ಮದೇ ದೇಶದ ವರ್ನೇಜ್ ತೈಲಾಗಾರದ ಮೇಲೆ ಬಾಂಬ್ ದಾಳಿ ನಡೆಸಿದೆ. ದೊಡ್ಡ ಮಟ್ಟದಲ್ಲಿ ಬೆಂಕಿಯ ಜ್ವಾಲೆಗಳು ಎದ್ದಿವೆ. ಗುಂಡಿನ ಚಕಮಕಿ, ಬಾಂಬ್ ದಾಳಿಗಳು ಮುಂದುವರೆದಿವೆ. ಅಷ್ಟಕ್ಕೂ, ರಷ್ಯಾದ ಪುಟಿನ್ ಸರ್ಕಾರಕ್ಕೆ ಕಂಟಕವಾಗಿರುವ ವಾಗ್ನರ್ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಯಾರು? ಏನಿದು ವಾಗ್ನರ್ ಗ್ರೂಪ್? 

 
ಯಾರು ಪ್ರಿಗೋಜಿನ್?

ಪ್ರಿಗೋಜಿನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಪರಮಾಪ್ತ. ಅಂತರಂಗದ ಗೆಳೆಯ. ಪುಟಿನ್ ಪಾಲಿನ ಅಡುಗೆ ಭಟ್ಟ ಹಾಗೂ ಫುಡ್ ಕಂಟ್ರಾಕ್ಟರ್. ಈತ 1980ರಲ್ಲಿ ದರೋಡೆ ಕೇಸಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. 1990ರಲ್ಲಿ ಪುಟಿನ್ಗೆ ಪ್ರಿಗೋಜಿನ್ ಪರಿಚಯವಾದ. 2000ರಲ್ಲಿ ಪುಟಿನ್ ಅಧ್ಯಕ್ಷರಾಗುತ್ತಲೇ ಪ್ರಿಗೋಜಿನ್ ವಾಣಿಜ್ಯ ವ್ಯವಹಾರ ವಿಸ್ತರಿಸಿದ. 2001ರಿಂದ ನಿರಂತರವಾಗಿ ಪುಟಿನ್ ಅತ್ಯಾಪ್ತ ವರ್ಗದಲ್ಲಿ ಗುರುತಿಸಿಕೊಂಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ