ಬಂಧಿಸಿ ಜೈಲಿಗಟ್ಟಿದ ಪೊಲೀಸ್ ಅಧಿಕಾರಿಯ ಪ್ರಾಣ ಉಳಿಸಿದ ಮಹಿಳೆ
ಸೋಮವಾರ, 14 ಸೆಪ್ಟಂಬರ್ 2020 (09:53 IST)
ಅಲಬಾಮಾ : ತನ್ನನ್ನು ಹಲವು ಬಾರಿ ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿಗೆ ಕಿಡ್ನಿ ನೀಡಿ ಮಹಿಳೆಯೊಬ್ಬಳು ಆತನ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾಳೆ.
ಜೋಸೆಲಿನ್ ಜೇಮ್ಸ್ ಎಂಬ ಅಲಬಾಮಾದ ಮಹಿಳೆ ಮಾದಕ ದ್ರವ್ಯ ವ್ಯಸನಿಯಾಗಿದ್ದಳು. ಈ ಹಿನ್ನಲೆಯಲ್ಲಿ ಆಕೆಯನ್ನು ಫಿಲ್ ಕ್ಯಾಂಪ್ಟೆಲ್ ಪೊಲೀಸ್ ಇಲಾಖೆಯ ಅಧಿಕಾರಿ ಟೆರೆಲ್ ಪಾಟರ್ 16 ಬಾರಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಆದರೆ ಅಧಿಕಾರಿ ಟೆರೆಲ್ ಪಾಟರ್ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಜೀವ ಉಳಿಯಲು ಕಿಡ್ನಿಯ ಅವಶ್ಯಕತೆ ಇತ್ತು. ಆಗ ದೇವರಂತೆ ಬಂದ ಜೋಸೆಲಿನ್ ಜೇಮ್ಸ್ ಅಧಿಕಾರಿಗೆ ತನ್ನ ಕಿಡ್ನಿಯನ್ನು ನೀಡಿ ಅವರ ಜೀವ ಉಳಿಸಿದ್ದಾಳೆ.