ಕೋಲ್ಕೊತ್ತಾ ಪರ ಆಡುತ್ತಿದ್ದರೂ, ದೆಹಲಿ ಮೇಲೆ ಗಂಭೀರ್ ಮನಸು!

ಶುಕ್ರವಾರ, 14 ಏಪ್ರಿಲ್ 2017 (12:11 IST)
ನವದೆಹಲಿ: ಐಪಿಎಲ್ ನಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದರೂ,  ನನ್ನ ಮನೆಸ್ಸೆಲ್ಲಾ ತವರು ದೆಹಲಿ ತಂಡದ ಪರವಿದೆ ಎಂದು ನಾಯಕ ಗೌತಮ್ ಗಂಭೀರ್ ಹೇಳಿಕೊಂಡಿದ್ದಾರೆ.

 

ಆರಂಭದಲ್ಲಿ ತವರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದ ಗಂಭೀರ್ ನಂತರ ಕೋಲ್ಕೊತ್ತಾ ತಂಡಕ್ಕೆ ಭಾರೀ ಮೊತ್ತಕ್ಕೆ ಹರಾಜಾಗಿದ್ದರು. ಆದರೆ ಈಗಲೂ ಆ ತಂಡದ ಮೇಲೆ ನನ್ನೊಲವಿದೆ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

 
ಅಲ್ಲದೆ, ಐಪಿಎಲ್ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಸಂದರ್ಭದಲ್ಲಿ ದೆಹಲಿ ತಂಡದ ಪರ ಆಡುತ್ತಿರುವುದು ನನ್ನ ಕನಸು ಎಂದು ಬಿಚ್ಚಿಟ್ಟಿದ್ದಾರೆ. ದೆಹಲಿ ತಂಡದ ಪರ ಗಂಭೀರ್ ಮೂರು ವರ್ಷ ಆಡಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ