ಐಪಿಎಲ್: ಹೈದರಾಬಾದ್ ಗೆ ಧವನ್, ವಿಲಿಯಮ್ಸನ್ ಆಸರೆ

ಗುರುವಾರ, 20 ಏಪ್ರಿಲ್ 2017 (07:33 IST)
ಹೈದರಾಬಾದ್: ಶಿಖರ್ ಧವನ್ ಮತ್ತು ಕೇನ್ ವಿಲಿಯಮ್ಸನ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 15 ರನ್ ಗಳಿಂದ ಸೋಲಿಸಿದೆ.

 
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತ್ತು. ಈ ಪೈಕಿ ಧವನ್ 70 ರನ್ ಹಾಗೂ ವಿಲಿಯಮ್ಸನ್ 89 ರನ್ ಗಳಿಸಿದರು. ಅಲ್ಲದೆ ದ್ವಿತೀಯ ವಿಕೆಟ್ ಗೆ ಈ ಜೋಡಿ 136 ರನ್ ಗಳ ಜತೆಯಾಟವಾಡಿತು.

ನಂತರ ಬ್ಯಾಟ್ ಮಾಡಿದ ಡೆಲ್ಲಿ5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ 56 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ಕರುಣ್ ನಾಯರ್ ಆಸರೆಯಾದರು. ಆದರೆ ಇವರಿಬ್ಬರು ವಿಕೆಟ್ ಒಪ್ಪಿಸುತ್ತಿದ್ದಂತೆ ಡೆಲ್ಲಿ ಧರೆಗುರುಳಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ